ಮೂಡಿಗೆರೆ : ಸಂಕಷ್ಟದಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡುವದೇ ನಮ್ಮ ಕೆಲಸ : ಕಮಾಂಡರ್ ಮಲ್ಲಿಕಾರ್ಜುನ್.

494
firstsuddi

ಮೂಡಿಗೆರೆ : ದುರ್ಗದಹಳ್ಳಿ ಗ್ರಾಮದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಾಲ್ವರು ರೋಗಿಗಳನ್ನು ರಕ್ಷಣೆ ಮಾಡಿದ ಬಳಿಕ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಮಾಂಡರ್ ಮಲ್ಲಿಕಾರ್ಜುನ್ ಅವರು, ರಕ್ಷಣೆ ಕಾರ್ಯಾಚರಣೆ ಯಶಸ್ವಿಯಾಗಿದೆ.

ನಮ್ಮ ಕೆಲಸ ನಮಗೆ ಖುಷಿ ಕೊಟ್ಟಿದೆ. ರೋಗಿಗಳನ್ನು 8 ಕಿ.ಮೀ ದೂರದಿಂದ ನಮ್ಮ ಸಿಬ್ಬಂದಿ ಹೆಗಲ ಮೇಲೆ ಹೊತ್ತು ತಂದಿದ್ದಾರೆ.ಸ್ವಲ್ಪ ಕಷ್ಟವಾದರೂ ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ಖುಷಿಯಿಂದ ರಕ್ಷಣೆ ಮಾಡಿದ್ದೇವೆ. ಸಂಕಷ್ಟದಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಕೆಲಸ. ದೇಶಕ್ಕೋಸ್ಕರ ಕೆಲಸ ಮಾಡುತ್ತಿರುವುದು ನನಗೂ ಹಾಗೂ ನನ್ನ ತಂಡಕ್ಕೆ ಖುಷಿ ಕೊಟ್ಟಿದೆ ಎಂದರು.