ಕಳಸ : ಸಾಧನೆ ಎಂಬುದು ಸಾಧಕರ ಸ್ವತ್ತಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನ ಹಾಗೂ ವಿಚಾರವಾದಿ ಓಸ್ವಾಲ್ಡ್ ಪಿರೇರ ಇವರ ಸಹಯೋಗದಲ್ಲಿ ನಡೆದ ಯುವ ಅನ್ವೇಷಣೆ ಮತ್ತು ಕೇರಿಯರ್ ಗೈಡ್ ಲೈನ್ ಕಾರ್ಯಗಾರದಲ್ಲಿ ಮಾತನಾಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ನಿಶ್ಚಿತ ಗುರಿ ಅಗತ್ಯ ದೃಡ ಸಂಕಲ್ಪವಿದ್ದು,ನಿರಂತರ ಪ್ರಯತ್ನವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.
ವಿಚಾರವಾಧಿ ಓಸ್ವಾಲ್ಡ್ ಪಿರೇರ ಮಾತನಾಡಿ ಕಳಸದಲ್ಲಿ ಸರ್ಕಾರಿ ಸೇವೆಗೆ ಸೇರುವವರ ಪ್ರಮಾಣ ಕಡಿಮೆ ಇದೆ.ವಿದ್ಯಾರ್ಥಿದೆಸೆಯಲ್ಲಿ ಸೂಕ್ತ ಮಾರ್ಗದರ್ಶನ ಕೊರತೆ ಪ್ರಮುಖ ಕಾರಣವಾಗಿದೆ.ಆ ನಿಟ್ಟಿನಲ್ಲಿ ಪುಷ್ಪಗಿರಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯ ನಡೆಸುತ್ತಿದೆ ಎಂದರು.
ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ|ಮೋಹನ್ ರಾಜಣ್ಣ ಮಾತನಾಡಿ ಮಲೆನಾಡು ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲು ಉಚಿತ ಕಾರ್ಯಗಾರವನ್ನು ನಡೆಸಲಾಗಿದೆ.ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾರ್ಗದರ್ಶನದಂತೆ ನಿರಂತರ ಅಧ್ಯಯನ ನಡೆಸಿ ಉದ್ಯೋಗವನ್ನು ಪಡೆದುಕೊಳ್ಳಬೇಕು.ಸಮಾಜದಲ್ಲಿ ಜ್ಞಾನಕ್ಕಿಂತ ಮಿಗಿಲಾದ ಸಂಪತ್ತಿಲ್ಲ. ಜ್ಞಾನ ಸಂಪಾದನೆಗೆ ಮುಂದಾಗಬೇಕು ಎಂದರು.
ಕಾರ್ಯಗಾರವನ್ನು ಬೆಂಗಳೂರು ಮಾನಸ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪೃಥ್ವಿರಾಜ್,ಪಿಡಿಒ ವಾಸುದೇವ್ ವಿವಿಧ ಪರೀಕ್ಷೆಗಳಿಗೆ ಬೇಕಾದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರೇಶು ಓಸ್ವಾಲ್ಡ್ ಪಿರೇರ,ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ಗಣೇಶ್ ಕುಕ್ಕೋಡು, ಸಂತೋಷ್ ಕೆ.ಬಿ, ಶಿವಕುಮಾರ್, ಪ್ರಶಾಂತ್, ಕಾವ್ಯ, ಸೌಮ್ಯ ಇತರರು ಇದ್ದರು.










