ನಾವು ಆಟಿಕೆ ಕ್ಷೇತ್ರದಲ್ಲಿ ಆತ್ಮನಿರ್ಭರವಾಗಬೇಕು, ಅಲ್ಲದೇ ಜಾಗತಿಕ ಮಾರುಕಟ್ಟೆಗೆ ಕೊಡುಗೆ ನೀಡಬೇಕು : ಪಿಎಂ ಮೋದಿ.

125
Firstsuddi

ನವದೆಹಲಿ : ಭಾರತದ ಆಟಿಕೆ ಮೇಳ-2021ಕ್ಕೆ ಇಂದು ವರ್ಚುವಲ್ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಬಳಿಕ  ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ತೀರಾ ಕಡಿಮೆಯಿದ್ದು, ದೇಶದಲ್ಲಿ ಮಾರಾಟವಾಗುವ ಆಟಿಕೆಗಳಲ್ಲಿ ಶೇ. 85 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ನಾವು ಆಟಿಕೆ ಕ್ಷೇತ್ರದಲ್ಲಿ ಆತ್ಮನಿರ್ಭರವಾಗಬೇಕು, ಅಲ್ಲದೇ ಜಾಗತಿಕ ಮಾರುಕಟ್ಟೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಭಾರತದ ಆಟಿಕೆ ಸಂಸ್ಕೃತಿ ಸಿಂಧೂ ಕಣಿವೆ ನಾಗರಿಕತೆಯಷ್ಟೇ ಹಳೆಯದಾದದ್ದು. ಭಾರತವು ಚೆಸ್ ಮತ್ತು ಲೂಡೋ ನಂತಹ ಕೆಲವು ಜನಪ್ರಿಯ ಆಟಗಳನ್ನು ಜಗತ್ತಿಗೆ ನೀಡಿದೆ. ಇಂದಿಗೂ ಭಾರತೀಯ ಆಟಿಕೆಗಳು ಪಾಶ್ಚಿಮಾತ್ಯ ಆಟಿಕೆಗಳಿಗಿಂತ ಸರಳ ಮತ್ತು ಅಗ್ಗವಾಗಿದ್ದು, ಇದರಲ್ಲಿ ಮನರಂಜನೆ ಮತ್ತು ಮನೋವಿಜ್ಞಾನದ ಅಂಶಗಳಿವೆ ಎಂದರು.

ಆಟಿಕೆ ತಯಾರಕರು ಕಡಿಮೆ ಪ್ಲಾಸ್ಟಿಕ್ ಮತ್ತು ಮರುಬಳಕೆ ಮಾಡಬಹುದಾದಂತಹ ವಸ್ತುಗಳನನ್ನು ಬಳಸಿ, ಪರಿಸರ ಸ್ನೇಹಿ ಹಾಗೂ ಮಕ್ಕಳ ಮನಸ್ಸಿಗೆ ಮುದ ನೀಡುವಂತಹ ಆಟಿಕೆಗಳನ್ನು ತಯಾರಿಸಬೇಕೆಂದು ಪ್ರಧಾನಿ ಅವರು ಮನವಿ ಮಾಡಿದರು.