ಕೊಟ್ಟಿಗೆಹಾರ : ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಡಿಗೆರೆ ಹ್ಯಾಂಡ್ಪೋಸ್ಟ್ನಿಂದ ಕೊಟ್ಟಿಗೆಹಾರವರೆಗಿನ ರಸ್ತೆ ಅಭಿವೃದ್ದಿ ಕಾಮಗಾರಿಗೆ ತಂದ ಜೆಲ್ಲಿ, ಎಂ ಸ್ಯಾಂಡ್ ಕಳ್ಳರ ಪಾಲಾಗುತ್ತಿದೆ.
ರಸ್ತೆ ಕಾಮಗಾರಿಗೆ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಜೆಲ್ಲಿ, ಎಂ ಸ್ಯಾಂಡನ್ನು ತಂದು ಹಾಕಲಾಗಿದ್ದು, ರಾತ್ರಿ ಸಮಯದಲ್ಲಿ ಜೆಲ್ಲಿ ಎಂ ಸ್ಯಾಂಡನ್ನು ಕಳವು ಮಾಡುತ್ತಿರುವ ಘಟನೆಗಳು ನಡೆಯುತ್ತಿದೆ. ಅತ್ತಿಗೆರೆ ಗ್ರಾಮದ ಬಳಿ ಜೆಲ್ಲಿ. ಎಂ ಸ್ಯಾಂಡ್ ತುಂಬುತ್ತಿರುವುದು ಕಂಡು ಬಂದಿದ್ದು, ಸ್ಥಳಿಯರು ಹೋಗಿ ನೋಡಿದೊಡನೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕೆಲ ದಿನಗಳ ಹಿಂದೆ ಜೆಲ್ಲಿ, ಎಂ ಸ್ಯಾಂಡ್ ತುಂಬುತ್ತಿದ್ದಾಗ ಕಳ್ಳರನ್ನು ಹಿಡಿದು ಸ್ಥಳಿಯರು ಪೋಲಿಸರಿಗೆ ಒಪ್ಪಿಸಿದ್ದರು. ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ.










