ಮೈಸೂರಿನಲ್ಲಿ ಮನಕಲಕುವ ಘಟನೆ.. ಅಣ್ಣನ ಮೃತದೇಹ ನೋಡಲು ಬಂದ ತಂಗಿಗೆ ಹೃದಯಾಘಾತ!

93
firstsuddi

ಮೈಸೂರು : ಜಿಲ್ಲೆಯ ಹುಣಸೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಣ್ಣನ ಮೃತದೇಹ ನೋಡಲು ಬಂದ ತಂಗಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾಳೆ.

ರಶ್ಮಿ(21) ಸಾವನ್ನಪ್ಪಿರುವ ಯುವತಿ. ರಶ್ಮಿಯ ದೊಡ್ಡಪ್ಪನ ಮಗ ಕೀರ್ತಿರಾಜ್ ಸೋಮವಾರ ರಾತ್ರಿ ಹುಣಸೂರು ತಾಲೂಕಿನ ಮೈಸೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಇಂದು ಕೀರ್ತಿ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ರಶ್ಮಿ ಅಣ್ಣನ ಮೃತ ದೇಹ ನೋಡಿ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ.

ತಕ್ಷಣ ರಶ್ಮಿಯನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಪ್ರಾಣಬಿಟ್ಟಿದ್ದಾಳೆ. ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.