ಮೈಸೂರಿನ ಶಕ್ತಿಧಾಮದಲ್ಲಿ ಮಕ್ಕಳ ಜೊತೆ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಶಿವಣ್ಣ ದಂಪತಿ…

81
firstsuddi

ಮೈಸೂರಿನ ಶಕ್ತಿಧಾಮದಲ್ಲಿ ಇಂದು ಮಕ್ಕಳ ಜೊತೆ 77ನೇ ಸ್ವಾತಂತ್ರ್ಯದಿನಾಚರಣೆಯನ್ನು ಶಿವರಾಜ್‌ಕುಮಾರ್ ದಂಪತಿ ಆಚರಿಸಿದ್ದಾರೆ. ಧ್ವಜಾರೋಹಣ ಮಾಡಿ ಮಕ್ಕಳ ಜೊತೆ ಸಂಭ್ರಮಿಸಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸದ್ಯ ಶಿವಣ್ಣ ‘ಜೈಲರ್’ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ತಮ್ಮ ಮುಂಬರುವ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟು, ಮೈಸೂರಿನ ಶಕ್ತಿಧಾಮಕ್ಕೆ ಶಿವಣ್ಣ ದಂಪತಿ ಭೇಟಿ ನೀಡಿದ್ದಾರೆ. ಅವರ ಆಗಮನ ಮಕ್ಕಳಿಗೆ ಖುಷಿ ಕೊಟ್ಟಿದೆ. ಸಂಭ್ರಮದಿಂದ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಶಿವಣ್ಣ ಜೊತೆ ಶಕ್ತಿಧಾಮದ ಶಿಕ್ಷಕರು ಕೂಡ ಸಾಥ್ ನೀಡಿದ್ದಾರೆ.

ಶೂಟಿಂಗ್ ಇಲ್ಲದೇ ಇರುವ ಸಮಯದಲ್ಲಿ ಆಗಾಗ ಶಕ್ತಿಧಾಮಕ್ಕೆ ಶಿವರಾಜ್‌ಕುಮಾರ್- ಪತ್ನಿ ಗೀತಾ ಭೇಟಿ ನೀಡುತ್ತಾರೆ.