ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಪತಿ ಫಹಾದ್ ಅಹ್ಮದ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಬಾಲಿವುಡ್ ಖ್ಯಾತ ನಟಿ ಸ್ವರಾ ಭಾಸ್ವರ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಅವರು ತಾಯಿ ಆಗುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ‘ನಿಮ್ಮೆಲ್ಲ ಪ್ರಾರ್ಥನೆಗಳು ಒಟ್ಟಿಗೆ ನೆರವೇರುತ್ತವೆ. ವಿಶ್ ಮಾಡಿ, ಅಕ್ಟೋಬರ್ ಬೇಬಿ’ ಎಂದು ಬರೆದುಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ಯುವ ಅಧ್ಯಕ್ಷ ಫಹಾದ್ ಜೊತೆ ಸ್ವರಾ ವಿಶೇಷ ಕಾಯ್ದೆಯಡಿ ಜ.6ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇತ್ತೀಚಿಗೆ ತಮ್ಮ ಮದುವೆಯ ಬಗ್ಗೆ ಸ್ವರಾ ಅಧಿಕೃತವಾಗಿ ತಿಳಿಸಿದ್ದರು.
ಬರೀ ವಿವಾದದ ಮೂಲಕವೇ ಗುರುತಿಸಿಕೊಂಡಿದ್ದ ಸ್ವರಾ, ನೇರ ದಿಟ್ಟ ಮಾತುಗಳಿಂದ ಸಾಕಷ್ಟು ವಿರೋಧಿಗಳನ್ನು ಗಳಿಸಿದ್ದರು. ಸ್ವರಾ ಏನೇ ಮಾತನಾಡಿದರೂ, ಅದು ವಿವಾದವಾಗಿ ಬದಲಾಗುತ್ತಿತ್ತು. ಈಗ ಅವೆಲ್ಲದರಿಂದ ದೂರ ಸರಿದು, ಹೊಸ ಜೀವನ ಕಟ್ಟಿಕೊಂಡಿದ್ದಾರೆ.










