ಮೊಬೈಲ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವುಗಳ ಮೇಲೆ ಕುಳಿತ ಮಹಿಳೆ, ಹಾವು ಕಚ್ಚಿ ಸಾವು…

684
firstsuddi

ಚಂಡೀಘಡ : ಮಹಿಳೆಯೊಬ್ಬರು ಫೋನಿನಲ್ಲಿ ಮಾತನಾಡುತ್ತಾ ಹಾಸಿಗೆ ಮೇಲೆ ಸರಸವಾಡುತ್ತಿದ್ದ ಜೋಡಿ ಹಾವುಗಳ ಮೇಲೆ ಕುಳಿತು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಗೋರಖ್‍ಪುರದ ರಿಯಾನವ್ ಗ್ರಾಮದಲ್ಲಿ ನಡೆದಿದೆ. ಗೀತಾ ಎಂಬ ಮಹಿಳೆ ಥಾಯ್‍ಲ್ಯಾಂಡ್‍ನಲ್ಲಿರುವ ತನ್ನ ಪತಿಯ ಜೊತೆ ಮಾತನಾಡುತ್ತಾ ಹಾಸಿಗೆ ಮೇಲೆ ಹಾವು ಇರುವುದನ್ನು ಗಮನಿಸದೇ ಹಾವಿನ ಮೇಲೆ ಕುಳಿತಿದ್ದು, ಪರಿಣಾಮ ಎರಡೂ ಹಾವುಗಳು ಗೀತಾ ಅವರಿಗೆ ಕಚ್ಚಿದೆ. ಹಾವು ಕಚ್ಚಿದ ಕೂಡಲೇ ಸಂಬಂಧಿಕರು ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎರಡೂ ಹಾವುಗಳು ಕಚ್ಚಿದ ಪರಿಣಾಮ ಗೀತಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.