ಮೋರ್ಬಿ ಸೇತುವೆ ದುರಂತದ ಕುರಿತು ಟ್ವೀಟ್ – ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಅರೆಸ್ಟ್…

24
firstsuddi

ಅಹಮದಾಬಾದ್ : ಗುಜರಾತಿನ ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ್ದ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರನ್ನ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಸಾಕೇತ್ ಗೋಖಲೆ ಅವರು ನಿನ್ನೆ ರಾತ್ರಿ ದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದರು. ಅಲ್ಲಿಂದ ಗುಜರಾತ್ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿಯಾಗಲಿ ಅಥವಾ ಗುಜರಾತ್ ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಗೋಖಲೆ ಅವರನ್ನು ಬಂಧಿಸಲು ಕಾರಣವಾದ ಟ್ವೀಟ್ ಯಾವುದೆಂದು ನಿರ್ದಿಷ್ಟಪಡಿಸಿಲ್ಲ. ಇತ್ತೀಚಿನ ಟ್ವೀಟ್ ನಲ್ಲಿ ಸಾಕೇತ್ ಗೋಖಲೆ `ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಮಾಹಿತಿ ಪ್ರಕಾರ ಪ್ರಧಾನಿ ಅವರು ಮೋರ್ಬಿಗೆ ಭೇಟಿ ನೀಡಲು ಖರ್ಚಾಗಿದ್ದು 30 ಕೋಟಿ ರೂ.’ ಎಂದು ಉಲ್ಲೇಖಿಸಿದ್ದರು. ಈ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸತ್ಯ ಪರಿಶೀಲನೆ ನಡೆಸಿ ಆರ್ ಟಿಐ ಮಾಹಿತಿ ಸುಳ್ಳು ಎಂದು ಹೇಳಿತ್ತು.

ಮಮತಾ ಬ್ಯಾನರ್ಜಿ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದು ರಾಜಕೀಯ ಸೇಡು ಎಂದು ಕಿಡಿ ಕಾರಿದ್ದಾರೆ.