ಯೋಧರ ಭರ್ಜರಿ ಕಾರ್ಯಾಚರಣೆ-ಒಳನುಸುಳಲು ಯತ್ನಿಸಿದ ಐವರು ಉಗ್ರರ ಹತ್ಯೆ…

124
firstsuddi

ಪಂಜಾಬ್ : ಗಡಿಯಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಐವರು ನುಸುಳುಕೋರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ. ಪಂಜಾಬ್‍ನ ತಾರ್ನ್ ತಾರನ್ ಅಂತರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ನುಸುಳುಕೋರರನ್ನು ಗಮನಿಸಿದ ಬಿ.ಎಸ್.ಎಫ್ ಯೋಧರು ಕಾರ್ಯಾಚರಣೆಗೆ ಮುಂದಾದರು. ಈ ವೇಳೆ ನುಸುಳುಕೋರರು ಹಾಗೂ ಭದ್ರತಾ ಪಡೆಗಳ ಗುಂಡಿನ ದಾಳಿ ನಡೆದಿದ್ದು, ಯೋಧರ ಗುಂಡಿನ ದಾಳಿಗೆ ಐವರು ಉಗ್ರರು ಹತ್ಯೆಯಾಗಿದ್ದಾರೆ. ಇನ್ನು ಸ್ಥಳದಲ್ಲಿ ಕೆಲವು ನುಸುಳುಕೋರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ.