‘ರಶ್ಮಿಕಾ ಮಂದಣ್ಣ ಬಗ್ಗೆ ನಾನು ಹಾಗೆಲ್ಲ ಹೇಳಿಲ್ಲ, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ’ – ಐಶ್ವರ್ಯಾ ರಾಜೇಶ್ ಸ್ಪಷ್ಟನೆ…

54
firstsuddi

ಟಾಲಿವುಡ್ ನಟಿ ಐಶ್ವರ್ಯಾ ರಾಜೇಶ್ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಬಗ್ಗೆ ಅವರು ಆಡಿದ ಮಾತುಗಳು ಚರ್ಚೆಗೆ ಕಾರಣ ಆಗಿದ್ದವು. ಆದರೆ ಈಗ ತಮ್ಮ ಹೇಳಿಕೆ ಬಗ್ಗೆ ಐಶ್ವರ್ಯಾ ರಾಜೇಶ್ ಅವರು ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ‘ಪುಷ್ಪ ಸಿನಿಮಾದಲ್ಲಿನ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಮಂದಣ್ಣ ಅವರಿಗಿಂತ ನಾನೇ ಚೆನ್ನಾಗಿ ಮಾಡುತ್ತಿದ್ದೆ’ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದರು ಎಂದು ಸುದ್ದಿ ಆಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು.

ಈ ಕುರಿತು ಐಶ್ವರ್ಯಾ ರಾಜೇಶ್ ಅವರ ಪಿ.ಆರ್ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ, ‘ಇದೊಂದು ತಪ್ಪು ಕಲ್ಪನೆಯಿಂದ ಆದ ಪ್ರಮಾದ. ಯಾವುದೇ ಕಾರಣಕ್ಕೂ ಐಶ್ವರ್ಯಾ ಅವರು ಆ ರೀತಿ ಮಾತುಗಳನ್ನು ಆಡಿಲ್ಲ. ‘ನಿಮ್ಮ ನೆಚ್ಚಿನ ಪಾತ್ರ ಯಾವುದು? ಯಾವ ರೀತಿಯ ಪಾತ್ರದಲ್ಲಿ ಕಾಣಲು ಬಯಸುತ್ತೀರಿ’ ಎಂದು ಕೇಳಲಾದ ಪ್ರಶ್ನೆಗೆ ‘ಪುಷ್ಪ ಸಿನಿಮಾದ ಶ್ರೀವಲ್ಲಿ ರೀತಿಯ ಪಾತ್ರಗಳು ಎಂದರೆ ನನಗೆ ಇಷ್ಟ. ಆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ’ ಎಂದಿದ್ದಾರೆ.