ರೈಲ್ವೇ ಕಾಮಗಾರಿ : 18 ರೈಲುಗಳ ಸಂಚಾರ ತಾತ್ಕಾಲಿಕ ಸ್ಥಗಿತ…

77
firstsuddi

ದಕ್ಷಿಣ ಕನ್ನಡ : ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳೂರು ಬೆಂಗಳೂರು ಸೇರಿದಂತೆ 18 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಮಂಗಳೂರಿನ ಪಡೀಲ್ ಮತ್ತು ಕುಲಶೇಖರ ಮಧ್ಯೆ ಜೋಡಿ ಮಾರ್ಗದ ಕಾಮಗಾರಿಗಾಗಿ ರೈಲ್ವೆ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಪುಣೆ ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು ಮಾ.19 ಮತ್ತು 21ರ ದಿನಕ್ಕೆ ರದ್ದಾಗಿದೆ. ಯಶವಂತಪುರ ಮತ್ತು ಕಾರವಾರ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಮಾ.18 ಮತ್ತು 19 ರಂದು ರದ್ದಾಗಿದೆ.

ಬೆಂಗಳೂರು ಕಾರವಾರ ಎಕ್ಸ್ ಪ್ರೆಸ್, ಯಶವಂತಪುರ ಕಣ್ಣೂರು ಎಕ್ಸ್ ಪ್ರೆಸ್, ಕೆಎಸ್ ಆರ್ ಬೆಂಗಳೂರು ಮಂಗಳೂರು ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಮಾ. 19 ಮತ್ತು 20 ರಂದು ರದ್ದಾಗಿದೆ. ಯಶವಂತಪುರ ಮಂಗಳೂರು ಎಕ್ಸ್ ಪ್ರೆಸ್ ರೈಲು (16575/16516 ) ಮಾ. 17 ಮತ್ತು 18 ರಂದು ರದ್ದಾಗಿದೆ. ಯಶವಂತಪುರ ಮಂಗಳೂರು ಎಕ್ಸ್ ಪ್ರೆಸ್ (16539/16540) ಮಾ.19 ಮತ್ತು 20 ರಂದು ರದ್ದಾಗಿದೆ.