ಲಂಚ ಆರೋಪ – ಸಮೀರ್ ವಾಂಖೆಡೆ ವಿರುದ್ಧ ತನಿಖೆಗೆ ಆದೇಶ…

97
firstsuddi

ಮುಂಬೈ: ಮುಂಬೈ ನ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಮತ್ತು ಇತರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧವೇ ಇದೀಗ ಲಂಚ ಆರೋಪ ಕೇಳಿಬಂದಿದ್ದು,  ಅವರ ವಿರುದ್ಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ವಿಜಿಲೆನ್ಸ್ (ವಿಚಕ್ಷಣ ದಳ) ತನಿಖೆಗೆ ಆದೇಶಿಸಿದೆ.

ಎನ್‍ಸಿಬಿ ಪ್ರಧಾನ ಕಛೇರಿಯಲ್ಲಿ ಈ ವಿಚಾರಣೆ ನಡೆಯಲಿದ್ದು, ಉತ್ತರ ಪ್ರದೇಶದ ಎನ್‍ಸಿಬಿ ಉಪ ಮಹಾನಿರ್ದೇಶಕ (ಡಿಡಿಜಿ) ಜ್ಞಾನೇಶ್ವರ್ ಸಿಂಗ್ ಸಮೀರ್ ವಾಖೆಂಡೆ ವಿಚಾರಣೆ ನಡೆಸಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜ್ಞಾನೇಶ್ವರ್ ಸಿಂಗ್, ನಮ್ಮದು ವೃತ್ತಿಪರ ಸಂಸ್ಥೆ, ನಮ್ಮ ಸಿಬ್ಬಂದಿ ವಿರುದ್ಧ ಯಾವುದೇ ಆರೋಪಗಳು ಕೇಳಿ ಬಂದರು ನಾವು ವಿಚಾರಣೆಗೆ ಮುಕ್ತರಾಗಿದ್ದೇವೆ ಎಂದಿದ್ದಾರೆ.

ಡ್ರಗ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್, ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ ಬಿಡುಗಡೆ ಡಿಮ್ಯಾಂಡ್ ಮಾಡಲಾಗಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದರು. ಹಣಕ್ಕಾಗಿ ಸಮೀರ್ ವಾಂಖೆಡೆ ಕೆಪಿ ಗೋಸಾವಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ ಮಾಡಲಾಗಿತ್ತು.