ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ ; ಪ್ರಿಯಾಂಕಾ ಗಾಂಧಿ ಸೇರಿ 11 ಮಂದಿ ವಿರುದ್ಧ ಎಫ್‍ಐಆರ್…

70
firstsuddi

ಸಿತಾಪುರ್(ಉತ್ತರಪ್ರದೇಶ) : ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಯುಪಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸೀತಾಪುರ ಜಿಲ್ಲೆಯ ಹರ್ಗಾಂವ್ ಪೊಲೀಸ್ ಠಾಣೆ ಎಸ್ಹೆಚ್ಒ ಬ್ರಿಜೇಶ್ ತ್ರಿಪಾಠಿ, ಪ್ರಿಯಾಂಕಾ ಗಾಂಧಿ, ದೇವೇಂದ್ರ ಹೂಡಾ, ಹಾಗೂ ಅಜಯ್ ಕುಮಾರ್ ಲಲ್ಲೂ ಸೇರಿದಂತೆ 11 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 107/16ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಕಳೆದ 36 ಗಂಟೆಗಳಿಂದ ಉತ್ತರ ಪ್ರದೇಶದಲ್ಲಿರುವ ಸೀತಾಪುರದಲ್ಲಿ ಗೃಹಬಂಧನದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಅಲ್ಲದೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಕೂಡ ಇದೆ ಎಂದು ತಿಳಿದುಬಂದಿದೆ.