ಲಾಕ್‍ಡೌನ್ ಹಿನ್ನೆಲೆ, ಪೊಲೀಸ್ ಸಿಬ್ಬಂದಿಗಳಿಗೆ 14 ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

214
firstsuddi

ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್‍ಡೌನ್ ಮಾಡಿರುವ ಹಿನ್ನೆಲೆ, ಕೆಲವು ಅಗತ್ಯ ಸೇವೆಗಳಿಗೆ ತೊಂದರೆ ಆಗದಂತೆ ನಗರ ಪೊಲೀಸ್ ಆಯಕ್ತ ಭಾಸ್ಕರ್ ಅವರು ಪೊಲೀಸ್ ಸಿಬ್ಬಂಧಿಗಳಿಗೆ 14 ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

• ಹಾಲು, ಪೇಪರ್, ತರಕಾರಿ ತೆಗೆದುಕೊಳ್ಳುವವರಿಗೆ ತೊಂದರೆ ಕೊಡಬಾರದು. ಕ್ಯಾಶ್ ಬ್ಯಾಕ್ ಎಟಿಎಂಗಳಿಗೆ ಹಣ ತುಂಬುವವರಿಗೆ ಪಾಸ್ ಇದ್ದರೂ ಇಲ್ಲದಿದ್ದರೂ ಅವಕಾಶ ಮಾಡಿಕೊಡಬೇಕು.
• ದಿನಸಿ ಅಂಗಡಿಗಳು ಹಾಗೂ ಮಾರ್ಟ್‍ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪೈಂಟ್ ಮಾಡಿಸಬೇಕು. ಚಾಕ್‍ಪೀಸ್‍ನಲ್ಲಿ ಬರೆಯಬಾರದು.
• ಎಲ್ಲಾ ಪೊಲೀಸ್ ಠಾಣೆಯಲ್ಲಿ ಪಿಆರ್‍ಓ ಕಚೇರಿ ರಚಿಸಿ ಜನರಿಗೆ ಸರಿಯಾಗಿ ಸ್ಪಂಧಿಸಬೇಕು. ಸಮಸ್ಯೆ ಬಗೆಹರಿಯದೆ ಇದ್ದಾಗ ಡಿಸಿಪಿ ಎಸಿಪಿಗಳ ಬಳಿ ಕಳುಹಿಸಬೇಕು.
• ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‍ಗಳನ್ನು ಬಳಸಬೇಕು. ಅವಶ್ಯಕತೆಯಿದ್ದಲ್ಲಿ ಮಾತ್ರ ಬಿಡಬೇಕು.
• ಈಗಾಗಲೇ ಸೀಸ್ ಮಾಡಿರುವ ವಾಹನಗಳ ಮಾಲೀಕರಿಗೆ ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿ ಮತ್ತೊಮ್ಮೆ ಈ ರೀತಿ ಆದರೆ 2 ವೀಲರ್ ಜೊತೆಗೆ 4 ವೀಲರ್‍ಗಳನ್ನು ಸೀಸ್ ಮಾಡುತ್ತೇವೆ ಎಂದು ಎಚ್ಚರಿಸಬೇಕು.
• ಎಲ್ಲಾ ಕಡೆ ಪಾಸ್‍ಗಳನ್ನು ವಿತರಿಸಲಾಗಿದ್ದು, ಊಟ ಪೂರೈಕೆ ಹಾಗೂ ಅಗತ್ಯ ಇರುವವರಿಗೆ ಮಾತ್ರ ಪಾಸ್ ನೀಡಬೇಕು. ಅದನ್ನು ತಮ್ಮಲ್ಲಿಯೇ ಇಟ್ಟುಕೊಂಡು ಸುತ್ತಾಡುವವರನ್ನು ಪರಿಶೀಲನೆ ಮಾಡಬೇಕು.
• ಪೊಲೀಸರು ಎಲ್ಲಾ ಭಾಗದ ವೀಡಿಯೋ ಚಿತ್ರಣ ಮಾಡಬೇಕು.
• ಪೊಲೀಸ್ ಅಧಿಕಾರಿಗಳು ಲಾಠಿ ಬಳಸಬಾರದು. ವಾಹನಗಳನ್ನು ವಶಕ್ಕೆ ಪಡೆದಿದ್ದರೆ ಅದನ್ನು ವೀಡಿಯೋ ಮಾಡಿಕೊಳ್ಳಬೇಕು.
• ಪಿಜಿಗಳ ಮುಖ್ಯಸ್ಥರು ತೊಂದರೆ ನೀಡುತ್ತಿದ್ದರೆ ಅಂತಹವರಿಗೆ ಬುದ್ಧಿ ಹೇಳಿ ಪಿಜಿಯಲ್ಲೇ ಊಟದ ವ್ಯವಸ್ಥೆ ಮಾಡಬೇಕು.
• ಪೊಲೀಸ್ ಸಿಬ್ಬಂದಿಗಳಿಗೂ ವಿಶ್ರಾಂತಿಯ ಅವಶ್ಯಕತೆ ಇರುವುದರಿಂದ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡಬೇಕು.
• ಡಯಾಲಿಸಿಸ್ ಹಾಗೂ ಕೆಲವು ವೈದ್ಯಕೀಯ ನೆವು ಬೇಕಿದ್ದಲ್ಲಿ ಅಂತಹವರಿಗೆ ಹೊಯ್ಸಳ ವಾಹನ ಪಿಕಪ್ ಅಂಡ್ ಡ್ರಾಪ್ ಮಾಡುವ ಮೂಲಕ ಜನರ ಆರೋಗ್ಯಕ್ಕೆ ಸ್ಪಂಧಿಸಬೇಕು.
• ಬೆಳಿಗ್ಗೆ ವಾಕ್ ಹೋಗುವವರಿಗೆ ಸರ್ಕಾರ ಕಡಿವಾಣ ಹಾಕಿದೆ. ಗುಂಪಿನಲ್ಲಿ ವಾಕ್ ಹೋಗುವವರಿಗೆ ಮೈಕ್‍ನಲ್ಲಿ ಅನೌನ್ಸ್ ಮಾಡಿ ಮನೆಗೆ ವಾಪಸ್ ಕಳುಹಿಸಬೇಕು.
• ಬೇರೆ ರಾಜ್ಯಗಳಿಂದ ಬಂದವರಿಗೆ ಸಮಸ್ಯೆಯಾದರೆ ಆಯಾ ಠಾಣಾ ವ್ಯಾಪ್ತಿಗಳ ಪೊಲೀಸರು ಸ್ಪಂಧಿಸಬೇಕು. ಇಲ್ಲದಿದ್ದರೆ ಡಿಸಿಪಿಗಳ ಗಮನಕ್ಕೆ ತರಬೇಕು.
• ಯಾರು ಆಹಾರ ಪೂರೈಕೆ ಸಹಾಯ ಮಾಡುತ್ತಾರೋ ಅವರು ಸಹಾಯ ಮಾಡಿ ಕೂಡಲೇ ಮನೆಗೆ ತೆರಳುವಂತೆ ನೋಡಿಕೊಳ್ಳಬೇಕು ಎಂದು ಸೂಚನೆಗಳನ್ನು ನೀಡಿದ್ದು, ಇದೇ ವೇಲೆ ಸರ್ಕಾರದೊಂದಿಗೆ ಕೈ ಜೋಡಿಸಿ ಹಗಲು ರಾತ್ರಿ ಎನ್ನುವುದನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ.