ಲೈಂಗಿಕ ಕಿರುಕುಳ ಆರೋಪ ; ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು.

78
firstsuddi

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರಿಗೆ ಮುಂಬೈನ ಮೆಜೆಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಗಣೇಶ್ ಆಚಾರ್ಯ ವಿರುದ್ಧ 2020ರಲ್ಲಿ ಅವರ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2019-2020ರಲ್ಲಿ ಗಣೇಶ್ ಆಚಾರ್ಯ ತನ್ನನ್ನು ಅವರ ಕಚೇರಿಯಲ್ಲಿ ಭೇಟಿಯಾಗುವಂತೆ ಹೇಳಿದ್ದರು. ಭೇಟಿಯಾಗಲು ಹೋದಾಗಲೆಲ್ಲ ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಒತ್ತಾಯಸುತ್ತಿದ್ದರು ಎಂದು ದೂರುದಾರೆ ಗಂಭೀರ ಆರೋಪ ಮಾಡಿದ್ದರು.

2022 ಏಪ್ರಿಲ್ ನಲ್ಲಿ ಮುಂಬೈ ಪೊಲೀಸರು ಗಣೇಶ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೆ ಇದುವರೆಗೂ ಗಣೇಶ್ ಆಚಾರ್ಯ ಅವರ ಬಂಧನ ಆಗಿಲ್ಲ. ನಿನ್ನೆ ಗಣೇಶ್ ಆಚಾರ್ಯ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜಾಮೀನು ಮಂಜೂರು ಮಾಡಲಾಗಿದೆ.