ವರನಟ ಡಾ. ರಾಜ್‍ಕುಮಾರ್ ಅವರನ್ನು ಪಡೆದ ನಾವು ಧನ್ಯರು : ಡಾ. ಜಿ. ಪರಮೇಶ್ವರ್

257
firstsuddi

ಬೆಂಗಳೂರು : ಡಾ. ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ 13 ವರ್ಷವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಟ್ವೀಟ್ ಮಾಡಿದ್ದಾರೆ. ಸಾವಿರ ಜನುಮದ ಪುಣ್ಯವೋ ಏನೋ, ನಾನೀ ನಾಡಲಿ ಜನಿಸಿರುವೆ ತಪಸಿನ ಫಲವೋ ಹಿರಿಯರ ಒಲವೋ, ನಿಮ್ಮೀ ಪ್ರೀತಿಯ ಗಳಿಸಿರುವೆ ಮಯೂರ ಚಿತ್ರದ ಈ ಸಾಲುಗಳು ಅಣ್ಣಾವ್ರ ನಿಜ ಜೀವನಕ್ಕೂ ಸೂಕ್ತ. ಇಂತಹ ಅದ್ಭುತ ನಾಯಕನಟ, ವ್ಯಕ್ತಿಯನ್ನು ಪಡೆದ ನಾಡೂ, ನಾವೂ ಧನ್ಯರೇ! ನಮನ್ನಗಲಿ ೧೩ ವರ್ಷವಾಯಿತು ಎಂಬುದು ನಂಬಲಸಾಧ್ಯ. ಅಣ್ಣಾವ್ರು ನಮಗೆಂದಿಗೂ ಅಮರರೇ! ಎಂದು ಟ್ವೀಟ್ ಮಾಡಿದ್ದಾರೆ.