ವಸಿಷ್ಠ ಸಿಂಹ-ಹರಿಪ್ರಿಯಾ ಎಂಗೇಜ್‌ಮೆಂಟ್ ಫೋಟೋಗಳು ವೈರಲ್…

61
firstsuddi

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು, ಇದೀಗ ಎಂಗೇಜ್‌ಮೆಂಟ್ ಫೋಟೋಗಳು ಹೊರಬಿದ್ದಿದೆ.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವೆ ವಿಶಿಷ್ಟ ಪ್ರೇಮಕಥೆ ಆರಂಭವಾಗಿದೆ ಎಂಬ ಮಾತುಗಳು ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ದುಬೈ ಪ್ರವಾಸ ಮುಗಿಸಿಕೊಂಡು ಇಬ್ಬರೂ ಜೊತೆಯಲ್ಲಿ ಬಂದಿದ್ದರು. ದುಬೈನಿಂದ ಬಂದ ಬೆನ್ನಲ್ಲೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಇದೀಗ ಅವರ ಎಂಗೇಜ್‌ಮೆಂಟ್ ಫೋಟೋಗಳು ವೈರಲ್ ಆಗಿದ್ದು, ಸದ್ಯ ಈ ಜೋಡಿಯ ನಿಶ್ಚಿತಾರ್ಥದ ಫೋಟೋ ನೋಡಿ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

ಸಿಂಹದ ಮಡಿಲಲ್ಲಿ ಮಲಗಿರುವ ಮಗುವಿನ ಫೋಟೋವನ್ನ ಜೊತೆ `ಚಿನ್ನ ತೋಳಿನಲ್ಲಿ ಕಂದ ನಾನು’ ಎಂದು ಕ್ರಿಯೇಟಿವ್ ಆಗಿ ಮದುವೆ ಬಗೆಗಿನ ಸುದ್ದಿ ಬಗ್ಗೆ ಹರಿಪ್ರಿಯಾ, ಪೋಸ್ಟ್ ಮೂಲಕ ಖಚಿತಪಡಿಸಿದ್ದರು. ಅದೇ ರೀತಿಯ ಪೋಸ್ಟ್ ವಸಿಷ್ಠ ಕೂಡ ಶೇರ್ ಮಾಡಿ, ಎಂದು ನಿನ್ನ ನೆರಳಾಗಿ ಕಾಯುವೆ ಅಂತಾ ನಟ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಎಂಗೇಜ್ಮೆಂಟ್ ವಿಷ್ಯಕ್ಕೆ ಸ್ಪಷ್ಟನೆ ಕೊಟ್ಟಿದ್ದರು.

ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಈ ಜೋಡಿ ಮುಂದಿನ ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ.