ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು 14 ದಿನಕ್ಕೆ 6,500 ಕಿ.ಮೀ. ಬೈಕ್ ರೈಡ್ ಮಾಡಿದ 65 ವರ್ಷದ ವೃದ್ಧ!

84
firstsuddi

ಹುಬ್ಬಳ್ಳಿ : 65 ವರ್ಷದ ವೃದ್ಧರೊಬ್ಬರು 14 ದಿನಕ್ಕೆ 6,500 ಕಿ.ಮೀ. ಬೈಕ್ ರೈಡ್ ಮಾಡುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ.

ಹೌದು, ಹುಬ್ಬಳ್ಳಿಯ ಶಂಕರ ದೊಡ್ಡಮನಿ ಎಂಬುವವರು ಬೈಕ್ ನಲ್ಲೇ ದೇಶದ 6,500 ಕಿ.ಮೀ ಪ್ರದೇಶದಲ್ಲಿ ಸುತ್ತಾಡಿ ಯುವಕರ ಹುಬ್ಬೇರುವಂತೆ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಗೂ ಚತುಷ್ಕೋನ ರಸ್ತೆಯ ಪರ್ಯಟನೆಯ ಉದ್ದೇಶದಿಂದ ಬೈಕ್ ರೈಡ್ ಹಮ್ಮಿಕೊಳ್ಳಲಾಗಿತ್ತು. ಡಿಸೆಂಬರ್ 20ರಂದು ಇವರು ತಮ್ಮ ರೈಡ್ ಪ್ರಾರಂಭ ಮಾಡಿದ್ದರು. ನಿನ್ನೆಗೆ ಈ ಬೈಕ್ ರೈಡ್ ಮುಕ್ತಾಯಗೊಂಡಿದೆ. ಈ ಕಾರ್ಯಕ್ಕೆ ಚೆನ್ನಮ್ಮ ಸರ್ಕಲ್ನಲ್ಲಿ ಎಸಿಪಿ ವಿನೋದ್ ಮುಕ್ತೆದಾರ ಚಾಲನೆ ನೀಡಿದ್ದರು. ಶಂಕರ ದೊಡ್ಡಮನಿ ಹುಬ್ಬಳ್ಳಿಯಿಂದ ರಾಯಲ್ ಎನ್ಫೀಲ್ಡ್ ಬೈಕ್ ಮೂಲಕ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಯುಪಿ, ಬಿಹಾರ, ಝಾರ್ಖಂಡ್, ಪಶ್ಚಿಮಬಂಗಾಳ, ಕೋಲ್ಕತ್ತಾ, ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಹೀಗೆ ದೇಶಾದ್ಯಂತ 14 ದಿನಗಳಲ್ಲಿ 6,500 ಕಿಲೋ ಮೀಟರ್ ಕ್ರಮಿಸಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇಳಿವಯಸ್ಸಿನಲ್ಲೂ ಇವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಹುಬ್ಬಳ್ಳಿಯ ಜನರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.