ವಿಕ್ಕಿ- ಕತ್ರಿನಾಗೆ ಒಟಿಟಿಯಿಂದ 100 ಕೋಟಿ ಆಫರ್.. ಕಾರಣ ಏನು ಗೊತ್ತಾ?

77
firstsuddi

ಹೈದರಾಬಾದ್(ತೆಲಂಗಾಣ) : ಬಾಲಿವುಡ್ ನಟಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಅದ್ಧೂರಿ ವಿವಾಹ ಆಗಲಿದ್ದಾರೆ ಎಂಬ ವದಂತಿ ಇದೆ. ಈ ಮಧ್ಯೆ ಪ್ರಮುಖ ಒಟಿಟಿಯೊಂದು ವಿಕ್ಕಿ- ಕತ್ರಿನಾ ಮದುವೆ ಪ್ರಸಾರಕ್ಕಾಗಿ 100 ಕೋಟಿ ರೂಪಾಯಿ ಆಫರ್ ನೀಡಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾಗಲಿರುವ ಈ ಸೆಲೆಬ್ರಿಟಿ ಜೋಡಿ ಓಟಿಟಿಯ ಆಫರ್ ಗೆ ಅನುಮತಿ ನೀಡುತ್ತಾರೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ಒಂದು ವೇಳೆ ಕತ್ರಿನಾ-ವಿಕ್ಕಿ 100 ಕೋಟಿ ರೂ. ಒಪ್ಪಂದಕ್ಕೆ ಒಪ್ಪಿಕೊಂಡರೆ, ಇವರ ವಿವಾಹವನ್ನು ಓಟಿಟಿ ವೇದಿಕೆಯಲ್ಲಿ ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ನೋಡಬಹುದು.

ಬಾಲಿವುಡ್ ನ ಖ್ಯಾತ ಜೋಡಿಯಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹದ ದೃಶ್ಯಗಳ ಮಾರಾಟಕ್ಕೆ ಇದೇ ರೀತಿಯ ಆಫರ್ ಬಂದಿತ್ತು. ಆದರೆ, ಇದನ್ನು ದೀಪ್ವೀರ್ ಜೋಡಿ ನಿರಾಕರಿಸಿತ್ತು.