ವಿಶ್ವಕರ್ಮ ಸಮುದಾಯದ ಜನ ತಮ್ಮ ಮಕ್ಕಳಿಗೆ ಕುಲಕಸುಬನ್ನು ಕಲಿಸುವುದರ ಜೊತೆಗೆ ಅವರನ್ನು ಶಿಕ್ಷಣವಂತರನ್ನಾಗಿಯೂ ಮಾಡಬೇಕು- ಎಸ್.ಎಲ್.ಧರ್ಮೇಗೌಡ

757
firstsuddi

ಚಿಕ್ಕಮಗಳೂರು -ವಿಶ್ವಕರ್ಮ ಸಮುದಾಯದ ಜನ ತಮ್ಮ ಮಕ್ಕಳಿಗೆ ಕುಲಕಸುಬನ್ನು ಕಲಿಸುವುದರ ಜೊತೆಗೆ ಅವರನ್ನು ಶಿಕ್ಷಣವಂತರನ್ನಾಗಿಯೂ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಸಲಹೆ ಮಾಡಿದರು.
ವಿಶ್ವಕರ್ಮ ಚಾರಿಟಬಲ್ ಟ್ರಸ್ಟ್ ತಾಲ್ಲೂಕಿನ ಸರಪನಹಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮುದಾಯಕ್ಕೆ ಹಿಂದೆ ಬಹಳಷ್ಟು ಗೌರವ ಮತ್ತು ಮಹತ್ವವಿತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಕಡಿಮೆಯಾಗುತ್ತಿದೆ ಇದಕ್ಕೆ ಮೂಲ ಕಾರಣ ಆ ವರ್ಗದ ಜನ ತಮ್ಮ ಕುಲಕಸುಬಿನಿಂದ ದೂರಾಗಿರುವುದು ಎಂದ ಅವರು ಈಗಲಾದರೂ ಎಚ್ಚೆತ್ತು ತಮ್ಮ ಮಕ್ಕಳಿಗೆ ಕುಲಕಸುಬನ್ನು ಕಲಿಸುವ ಮೂಲಕ ಅದನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ಸಮುದಾಯದ ವತಿಯಿಂದ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನಕ್ಕೆ ಐದು ಲಕ್ಷ ರೂ ಅನುದಾನ ಒದಗಿಸುವ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ವಿಶ್ವಕರ್ಮ ಸಮುದಾಯದಲ್ಲಿರುವ ಕಲೆ ಮತ್ತು ನೈಪುಣ್ಯತೆ ನಿಂತ ನೀರಾಗಬಾರದು ಅದು ಮುಂದಿನ ಪೀಳಿಗೆಗೂ ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಮಾತನಾಡಿ ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಸಮುದಾಯದ ಹಿರಿಯ ಜಗದೀಶಾಚಾರ್ ಅವರನ್ನು ರಾಜ್ಯ ವಿಶ್ವಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ವಿಗ್ರಹ ಶಿಲ್ಪಿ ಜಯಣ್ಣಾಚಾರ್ ಉಪನ್ಯಾಸ ನೀಡಿದರು, ವಿಶ್ವಕರ್ಮ ಸಮುದಾಯದಿಂದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಅವರನ್ನು ಸನ್ಮಾನಿಸಲಾಯಿತು.
ವಿಶ್ವಕರ್ಮ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಜನಾರ್ಧನಾಚಾರ್ ಅಧ್ಯಕ್ಷತೆ ವಹಿಸಿದ್ದರು, ವಿಶ್ವಕರ್ಮ ಸಾಮಾಜಿಕ ಮತ್ತು ರಾಜಕೀಯ ಕ್ರಿಯಾ ಸಮಿತಿ ರಾಜ್ಯ ಸಂಚಾಲಕ ಜಗದೀಶಾಚಾರ್, ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಭರತೇಶ್, ನಿವೃತ್ತ ಮುಖ್ಯಶಿಕ್ಷಕ ಪಾಂಡುರಂಗಪ್ಪ, ಕಾಳಿಕಾಂಭ ದೇವಾಲಯದ ಅಧ್ಯಕ್ಷ ಪರಮೇಶ್, ಪುಟ್ಟಸ್ವಾಮಿ ಆಚಾರ್, ವೀರಾಚಾರ್, ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.
ಪತ್ರಕರ್ತ ಓಂಕಾರಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು, ವೇಣುಗೋಪಾಲ್ ಸ್ವಾಗತಿಸಿದರು, ಛಾಯಾಪತಿ ವಂದಿಸಿದರು.