ಚಿಕ್ಕಮಗಳೂರು :ಕೊಂಕಣಿ ಭಾಷಿಗರು ಸೇರಿದಂತೆ ಎಲ್ಲಾ ಸಮುದಾಯದವರೂ ತಮ್ಮ ಮಾತೃಭಾಷೆಯನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಶಾಸಕ ಸಿ.ಟಿ ರವಿ ಸಲಹೆ ಮಾಡಿದರು.ಕೊಂಕಣಿ ರಾಕಣ್ ಸಂಚಾಲನ್ ಸಂಸ್ಥೆ ನಗರದ ಕ್ಯಾಥೋಲಿಕ್ ಕ್ಲಬ್ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಾತೆ ಮರಿಯಾ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾತೃಭಾಷೆ ನಮ್ಮ ಸಂಸ್ಕøತಿಯ ಕೀಲಿ ಕೈ ಇದ್ದಂತೆ, ಅದನ್ನು ಕಳೆದುಕೊಂಡರೆ ಸಹಸ್ರಾರು ವರ್ಷಗಳ ನಮ್ಮ ಇತಿಹಾಸ ಮತ್ತು ಸಂಸ್ಕøತಿಯನ್ನು ಕಳೆದುಕೊಂಡು ನಾವು ಅನಾಥತರಾಗುತ್ತೇವೆ ಎಂದು ಎಚ್ಚರಿಸಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ್ಯ ಎಂದ ಅವರು ಆದರೆ ಅದರ ನೆಪದಲ್ಲಿ ಮಾತೃಭಾಷೆಯನ್ನು ಮರೆಯಬಾರದು ಕನಿಷ್ಠ ಮನೆಯಲ್ಲಾದರೂ ಮಾತನಾಡುವ ಮೂಲಕ ಅದನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಕಿವಿ ಮಾತು ಹೇಳಿದರು.
ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ ಕ್ರೈಸ್ತ ಸಮುದಾಯದ ಜನ ಸೇವೆಗೆ ಹೆಸರಾದವರು ಮತ್ತು ಶಾಂತಿ ಪ್ರಿಯರು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಂಕಣಿ ರಾಕಣ್ ಸಂಚಾಲನ್ ಅಧ್ಯಕ್ಷ ಪ್ರಮೋದ್ ಪಿಂಟೋ, ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ 12ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಮರಿಯಾ ಜಯಂತಿ ಪ್ರಯುಕ್ತ ವಿವಿಧ ದಾರ್ಮಿಕ ವಿಧಿವಿದಾನಗಳು ನಡೆದವು, ಸಮುದಾಯದ ಭಕ್ತರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು, ಇದೇ ವೇಳೆ ಉನ್ನತ ವ್ಯಾಸಂಗ ಮಾಡುತ್ತಿರುವ 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಶಾಸಕರಾದ ಸಿ.ಟಿ ರವಿ ಮತ್ತು ಟಿ.ಡಿ ರಾಜೇಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ರಾಜ್ಯ ಕ್ರೈಸ್ತ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಮೈಕೆಲ್ ಸದಾನಂದ ಬ್ಯಾಪ್ಟಿಸ್ಟ್, ಸಂಘದ ನಿರ್ಧೇಕರಾದ ಸ್ಟ್ಯಾನಿ ಡಿಸಿಲ್ವಾ, ಕಿರಣ್ ಡಿಸೋಜ, ಎಸ್.ಎಫ್ ಲೂಯಿಸ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ್ಯ ಆದರೆ ಮಾತೃಭಾಷೆಯನ್ನು ಮರೆಯಬಾರದು.-ಸಿ.ಟಿ ರವಿ …










