ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಐವರ ರಕ್ಷಣೆ; ಇಬ್ಬರು ಪಿಂಪ್ ಗಳ ಬಂಧನ…

199
firstsuddi

ಮಂಗಳೂರು: ನಗರದ ಕಂಕನಾಡಿಯ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿರುವ ಎಂಬಲ್ಲಿಸ್ ಸೆಲೂನ್ ಮತ್ತು ಸ್ಪಾ ಎಂಬ ಹೆಸರಿನಲ್ಲಿ ನಡೆಯುತಿದ್ದ ವೇಶ್ಯಾವಾಟಿಕೆ ಜಾಲವನ್ನು ಕದ್ರಿ ಪೊಲೀಸರು ಗುರುವಾರ ಪತ್ತೆ ಹಚ್ಚಿದ್ದಾರೆ. ಈ ಜಾಲದಲ್ಲಿ ಸಿಲುಕಿದ್ದ ಐವರು ಯುವತಿಯರನ್ನು ರಕ್ಷಿಸಲಾಗಿದೆ. ಪಿಂಪ್‌ಗಳಾದ ಮಂಗಳಾದೇವಿಯ ವಾಲಿದ್ ಖಾನ್ ಮತ್ತು ಉತ್ತರ ಪ್ರದೇಶದ ಇಸ್ತಿಕಾರ್ ಎಂಬವರನ್ನು ಬಂಧಿಸಲಾಗಿದೆ. ಪಿಂಪ್ ವಿನೋದಾ ಎಂಬಾಕೆ ತಲೆಮರೆಸಿಕೊಂಡಿದ್ದಾಳೆ. ಆರೋಪಿಗಳ ವಿರುದ್ಧ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕದ್ರಿ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈ ಮಾರುತಿ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.