ಬಿಎಸ್‍ವೈ ನೇತೃತ್ವದ ಸರ್ಕಾರದ ವತಿಯಿಂದ ಸಾಮೂಹಿಕ ಮದುವೆ ಭಾಗ್ಯ – ಮದುವೆಗೆ ಷರತ್ತುಗಳು ಅನ್ವಯ…

668
firstsuddi

ಬೆಂಗಳೂರು : ಬಡವರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಜೋಡಿಗಳಿಗೆ ಮುಜರಾಯಿ ಇಲಾಖೆಯ ಎ ದರ್ಜೆ 100 ದೇವಾಲಯದಲ್ಲಿ ಸಾಮೂಹಿಕ ವಿವಾಹ ನಡೆಸುವುದಾಗಿ ಘೋಷಿಸಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು 2020ರ ಏಪ್ರಿಲ್ 26 ಹಾಗೂ ಮೇ 24ರಂದು ದೇವಾಲಯದಲ್ಲಿ ಸಾಮಾಹಿಕ ವಿವಾಹ ನಡೆಯಲಿದೆ ಎಂದು ತಿಳಿಸಿದರು. ಬಿಎಸ್‍ವೈ ನೇತೃತ್ವದ ಸರ್ಕಾರ ಒಂದೊಂದು ದೇವಾಲಯದಲ್ಲಿ ಒಟ್ಟು 100 ಜೋಡಿಗಳಿಗೆ ವಿವಾಹ ಮಾಡಿಸುವ ಗುರಿಯನ್ನು ಹೊಂದಿದ್ದು, ಪ್ರತಿ ವರ್ಷ 10 ಸಾವಿರ ಜೋಡಿಗಳಿಗೆ ವಿವಾಹ ಮಾಡಿಸುವ ಚಿಂತನೆ ನಡೆದಿದೆ. ಹಾಗೂ ಸರ್ಕಾರದ ವತಿಯಿಂದ ವಧುವಿಗೆ 40 ಸಾವಿರ ವೆಚ್ಚದಲ್ಲಿ 8ಗ್ರಾಂ ತಾಳಿಸರ, ಸೀರೆಗೆ 10 ಸಾವಿರ, ವರನಿಗೆ ವಸ್ತ್ರಕ್ಕಾಗಿ 5ಸಾವಿರ ರೂ ನೀಡಲಾಗುವುದು. ಮುಜರಾಯಿ ಇಲಾಖೆಯ ಬನಶಂಕರಿ ದೇವಾಲಯ, ಮೈಸೂರಿನ ಚಾಮುಂಡಿ, ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಎ ದರ್ಜೆ ದೇವಾಲಯಗಳನ್ನು ಸಾಮೂಹಿಕ ವಿವಾಹಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ವಿವಾಹವಾಗುವ ವಧು-ವರರಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.
• ವಿವಾಹವಾಗುವ ಜೋಡಿಗಳು 30 ದಿನಗಳ ಮೊದಲೇ ನೋಂದಣಿ ಮಾಡಿಕೊಳ್ಳಬೇಕು
• ವಧು-ವರರ ಪೋಷಕರ ಮದುವೆಯಲ್ಲಿ ಭಾಗವಹಿಸಬೇಕು.
• ಪ್ರೀತಿಸಿ ಮದುವೆಯಾಗುವ ಜೋಡಿಗಳಿಗೆ ಅವಕಾಶವಿಲ್ಲ.
• ಎರಡನೇ ಮದುವೆಗೆ ಅವಕಾಶವಿಲ್ಲ.
• ಕಡ್ಡಾಯವಾಗಿ ವರನಿಗೆ 21, ವಧುವಿಗೆ 18 ವರ್ಷ ಆಗಿರಬೇಕು.
• ಅಂತರ್ಜಾತಿ ವಿವಾಹವಾಗುವವರು ಪೋಷಕರ ಒಪ್ಪಿಗೆ ಇದ್ದರೆ ಆಗಬಹುದು.
• ಪೋಷಕರು ವಧು ವರರ ದಾಖಲೆಗಳನ್ನು ನೀಡಬೇಕು.