ಮನೆಯ ಮೇಲ್ಛಾವಣಿ ಕುಸಿದು 11 ತಿಂಗಳ ಮಗು ಸಾವು-ತಾಯಿ ಸ್ಥಿತಿ ಗಂಭೀರ…

203
firstsuddi

ಬಾಗಲಕೋಟೆ : ಮನೆಯ ಮೇಲ್ಛಾವಣಿ ಕುಸಿದು 11 ತಿಂಗಳ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ತೇರದಾಳ ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ನಡೆದಿದೆ. ಅಚಲ ಬುಜಬಲಿ ತಿಮ್ಮಣ್ಣನವರ ಮೃತ ಮಗು ಎಂದು ಗುರುತಿಸಲಾಗಿದ್ದು, ಈ ಬಾರಿ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ತಮದಡ್ಡಿ ಗ್ರಾಮ ಸಂಪೂರ್ಣ ಮುಳುಗಡೆಯಾಗಿತ್ತು. ನಿನ್ನೆ ರಾತ್ರಿ ಮನೆಯಲ್ಲಿ ತಾಯಿ ಮಗು ಸೇರಿ ನಾಲ್ವರು ಜೊತೆಯಲ್ಲಿ ಮಲಗಿದ್ದರು. ಈ ವೇಳೆ ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ಉಳಿದ ಇಬ್ಬರು ಎದ್ದು ಹೊರಗೆ ಹೋಗಿದ್ದು, ತಾಯಿ ಮಗು ಇನ್ನೂ ಮಲಗಿದ್ದರು. ಈ ವೇಳೆ ಭಾರಿ ಮಳೆಯಿಂದ ಶಿಥಿಲಗೊಂಡಿದ್ದ ಗೋಡೆ ಕುಸಿದು ಬಿದ್ದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಅಕ್ಷತಾ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ತೇರದಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.