ಶಾಲೆಗೆ ತೆರಳುತ್ತಿದ್ದ ವೇಳೆ ಬೈಕ್‍ನಿಂದ ಕೆಳಗೆ ಬಿದ್ದು ಶಿಕ್ಷಕಿ ಸಾವು…

1053
firstsuddi

ಹಾವೇರಿ : ಶಾಲೆಗೆ ತೆರಳುತ್ತಿದ್ದ ವೇಳೆ ಬೈಕ್‍ನಿಂದ ಕೆಳಗೆ ಬಿದ್ದು ಶಿಕ್ಷಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಗಂಗಾಜಲ ತಾಂಡದ ಬಳಿ ನಡೆದಿದೆ. ಲೀಲಾವತಿ ಕಟಿಗೇರ(33) ಮೃತ ಶಿಕ್ಷಕಿ ಎಂದು ಗುರುತಿಸಲಾಗಿದ್ದು, ಮಡ್ಲೇರಿ ಗ್ರಾಮದ ಬೀರೇಶ್ವರ ಪ್ರೌಢ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲೀಲಾವತಿ ಅವರು ಇಂದು ಬೆಳಿಗ್ಗೆ ಶಾಲೆಗೆ ತಡವಾಗಿತ್ತು ಎಂದು ತಮ್ಮ ಗಂಡ ಬಸವರಾಜು ಅವರ ಜೊತೆ ಬೈಕ್‍ನಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಲೀಲಾವತಿಯವರು ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಣೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.