ಬಿ.ಎಸ್ ಯಡಿಯೂರಪ್ಪ ಅವರ ಪಾಲಿಟಿಕ್ಸ್ ತಗೊಂಡು ನಾನೇನು ಮಾಡಲಿ : ಡಿ.ಕೆ. ಶಿವಕುಮಾರ್.

359
firstsuddi

ಬೆಂಗಳೂರು : ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಕೊಡಬಹುದು, ತಾಲ್ಲೂಕಿಗೊಂದು ಮೆಡಿಕಲ್ ಕಾಲೇಜ್ ಕೊಡಲು ಆಗುವುದಿಲ್ಲ ಎಂಬ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು, ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡಬೇಕು ಎಂಬುವುದು ನಮ್ಮ ಹಿಂದಿನ ಸರ್ಕಾರದಲ್ಲಿ ನಿರ್ಧಾರ. ಅಧಿಕಾರ ಯಾವುದೇ ಕಾರಣಕ್ಕೂ ಶಾಶ್ವತ ಅಲ್ಲ. ರಾಜಕೀಯ ದ್ವೇಷ ಮಾಡುವುದಾದರೆ ಮಾಡಲಿ. ಯಡಿಯೂರಪ್ಪ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವ ಮೂಲಕ ನಾನು ದ್ವೇಷದ ರಾಜಕಾರಣ ಮಾಡುತ್ತೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರ ಪಾಲಿಟಿಕ್ಸ್ ತಗೊಂಡು ನಾನೇನು ಮಾಡಲಿ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಇಲ್ಲ. ಹೀಗಾಗಿ ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜು ಶಿಫಾರಸ್ಸು ಮಾಡಿತ್ತು. ಇದರಿಂದಾಗಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೊಡಲಿ. ಯಡಿಯೂರಪ್ಪ ಅವರು ನನ್ನ ಜೊತೆ ಮಾತನಾಡಲಿ. ನಾನು ಕೂಡಾ ಅವರಿಗೆ ಪತ್ರ ಬರೆಯುತ್ತೇನೆ. ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಕೊಡದೇ ಇದ್ದರೆ ನಾನು ಸುಮ್ಮನೆ ಇರುವುದಿಲ್ಲ ಎಂದರು.