ಶಾಸಕ ಸತೀಶ್ ರೆಡ್ಡಿ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು!

90
firstsuddi

ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರಿಗೆ ಸೇರಿದ ಫಾರ್ಚೂನರ್ ಕಾರು ಸೇರಿದಂತೆ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ. ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ತಡರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಬೊಮ್ಮನಹಳ್ಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸತೀಶ್ ರೆಡ್ಡಿ, ತಡರಾತ್ರಿ 1 ಗಂಟೆ 23 ನಿಮಿಷಕ್ಕೆ ಇಬ್ಬರು ಎಂಟ್ರಿಯಾಗಿದ್ದಾರೆ. ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹಿಂದಿನ ಗೇಟ್ ನಿಂದ ಇಬ್ಬರು ಎಸ್ಕೇಪ್ ಆಗಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಿಂದಿನ ಗೇಟ್ ನಲ್ಲಿ ಸಿಸಿಟಿವಿ ಇದೆ ಅದರೆ ಅದರಲ್ಲಿ ಮುಖ ಸರಿಯಾಗಿ ಕಾಣಿಸೋದಿಲ್ಲ. ಪೊಲೀಸ್, ವಾಚ್ ಮೆನ್ ಇಬ್ಬರು ಮುಂದಿನ ಗೇಟಿನ ಬಳಿ ಇದ್ದರು. ಬೈಕ್ ಗಳಲ್ಲಿ ಇಬ್ಬರು ಬಂದಿದ್ರು ಅನ್ನೋದು ಗೊತ್ತಾಗಿದೆ. ಪೊಲೀಸರು ಈಗಾಗಲೇ ತನಿಖೆಯನ್ನ ಆರಂಭಿಸಿದ್ದಾರೆ. ರಾಜಕೀಯ ದ್ವೇಷದ ಹಿನ್ನೆಲೆಯಿಂದ ಘಟನೆ ನಡೆದಿದೆ ಎಂದು ಅನಿಸುತ್ತಿಲ್ಲ. ಇದನ್ನ ರಾಜಕೀಯವಾಗಿ ತೆಗೆದುಕೊಳ್ಳುವುದನ್ನ ನಿರಾಕರಿಸುತ್ತೇನೆ. ಯಾರೋ ಒಂದು ದುರಾಲೋಚನೆಯ ಮೆಸೇಜ್ ಪಾಸ್ ಮಾಡಿದ್ದಾರೆ. ಯಾರ ಮನೆಯಲ್ಲಿ ಏನು ಬೇಕಾದರೂ ಮಾಡಬಹುದು ಎಂದು ತೋರಿಸೋಕೆ ಈ ಕೃತ್ಯ ಮಾಡಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.