ಶಿವಮೊಗ್ಗ : ಭಾರಿ ಮಳೆಗೆ ಕುಸಿದು ಬಿದ್ದ ಮನೆ, ಪ್ರಾಣಾಪಾಯದಿಂದ ಪಾರು…

245
firstsuddi

ಶಿವಮೊಗ್ಗ : ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದು ಬಿದ್ದಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಮಲವಗೊಪ್ಪದ ಸೇವಾಲಾಲ್ ಬೀದಿಯ ಶೇಖರ್ ನಾಯಕ್ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿ 4ಜನ ವಾಸವಿದ್ದರು. ರಾತ್ರಿ ನಿದ್ದೆಗೆ ಜಾರಿದ ವೇಳೆ ಈ ಘಟನೆ ಸಂಭವಿಸಿದ್ದು, ಗ್ರಾಮಸ್ಥರ ಸಮಯ ಪ್ರಜ್ಷೆಯಿಂದ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.