ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬೆಳಗಾವಿಯ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಬರೆದಿದ್ದ ಪತ್ರ ಲಭ್ಯವಾಗಿದೆ.

ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ 2021ರ ಫೆಬ್ರವರಿ 15ರಂದು ಆರ್ಡಿಪಿಆರ್ಗೆ ಪತ್ರ ಬರೆದಿದ್ದಾರೆ.
ಇವರ ಪತ್ರದ ಮೇಲೆ ಅನುಮೋದನೆಗೆ ಆದೇಶಿಸಲಾಗಿದೆ ಎಂದು ಫೆಬ್ರವರಿ 26ರಂದು ಸಹಿ ಮಾಡಲಾಗಿದೆ. ಆದೇಶದ ಪ್ರತಿಗಳನ್ನು ಮಾರ್ಚ್ 5ರಂದು ನೀಡಲಾಗುವುದು ಎಂದು ಕೈಬರಹದಲ್ಲಿ ಬರೆದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆಯ ಸೀಲ್ ಹಾಕಲಾಗಿದೆ.










