ಸಕಲೇಶಪುರ : ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಿಸಿದ ಬಜರಂಗದಳ ಕಾರ್ಯಕರ್ತರು…

108
firstsuddi

ಸಕಲೇಶಪುರ : ಹಾಸನದಿಂದ ಸಕಲೇಶಪುರ ಮಾರ್ಗವಾಗಿ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು ಇಪ್ಪತ್ತು ಹಸು ಮತ್ತು ಎಮ್ಮೆಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಲ್ಲಿದ್ದ ಬಜರಂಗದಳ ಕಾರ್ಯಕರ್ತರು ಬಾಳ್ಳುಪೇಟೆ ಕಡೆಯಿಂದ ಬರುತ್ತಿದ್ದಾಗ ಲಾರಿ ಮುಂಭಾಗ ನಂಬರ್ ಪ್ಲೇಟ್ ಇಲ್ಲದನ್ನು ಗಮನಿಸಿ ಅನುಮಾನಾಸ್ಪದವಾಗಿದ್ದಂತಹ ಲಾರಿಯನ್ನು ಬಾಳ್ಳುಪೇಟೆ ಭಾಗದಿಂದ ಹಿಂಬಾಲಿಸಿದ್ದಾರೆ. ಆದರೆ ಲಾರಿ ಚಾಲಕನಿಗೆ ಅನುಮಾನ ಬಂದು ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಸಕಲೇಶಪುರ ನಗರ ಭಾಗದಲ್ಲಿರುವ ಪುರಸಭೆ ಮುಂಭಾಗ ಲಾರಿಯನ್ನು ಅಡ್ಡಗಟ್ಟಿದ್ದು , ಲಾರಿ ಚಾಲಕ ಪರಾರಿಯಾಗಲು ಯತ್ನಿಸಿ ದುರದೃಷ್ಟಕರ ರೀತಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆದರೆ ಮತ್ತೊಬ್ಬ ಲಾರಿಯಲ್ಲಿದ್ದ ವ್ಯಕ್ತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಕೂಡಲೇ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಸವರಾಜ ಚಿಂಚೋಳಿ ಯವರಿಗೆ ಮಾಹಿತಿಯನ್ನು ನೀಡಿದ್ದಾರೆ.

ಇಂದು ಬೆಳಿಗ್ಗೆ ಕೆಎ-07- 8098 ವಾಹನ ಸಮೇತ ಹಸುಗಳನ್ನು ಪೋಲಿಸರ ವಶಕ್ಕೆ ನೀಡಿದ್ದು ಸಕಲೇಶಪುರ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಚಿಂಚೋಳಿ ನೇತೃತ್ವದಲ್ಲಿ ಎಫ್ ಐಆರ್ ದಾಖಲಾಗಿದ್ದು, ಹಿಂಸಾತ್ಮಕವಾಗಿ ತುಂಬಿದ್ದ ಹಸುಗಳನ್ನು ಇನ್ನೊಂದು ಲಾರಿಯನ್ನು ಕರೆಸಿ ಪೋಲಿಸರ ಸಮ್ಮುಖದಲ್ಲಿ ಒಂದು ಲಾರಿಗೆ 9 ಹಸು ಇನ್ನೊಂದು ಲಾರಿಗೆ 9 ಹಸು ತುಂಬಿಸಿ ಮೈಸೂರಿನಲ್ಲಿರುವ ಪಿಂಜಾರ್ ಪೋಲ್ ಗೋಶಾಲೆಗೆ ಕಳುಹಿಸಿಕೊಡಲಾಯಿತು . ಈ ಕಾರ್ಯಾಚರಣೆಯನ್ನು ಕಂಡು ನಗರದ ನಾಗರಿಕರು ಪೋಲಿಸ್ ಹಾಗೂ ಬಜರಂಗದಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.