ಬೆಳಗಾವಿ : ಕೋವಿಡ್ ನಿಂದ ಯಾರೂ ಕೂಡ ಪ್ಯಾನಿಕ್ ಆಗೋದು ಬೇಡ. ಸದ್ಯಕ್ಕೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಾನು, ಸುಧಾಕರ್ ಸಭೆ ಮಾಡುತ್ತಿದ್ದೇವೆ. ಜನ ಸಹಕಾರ ನೀಡಿದ್ರೆ ಕೋವಿಡ್ ತಡೆಯಬಹುದು ಎಂದು ಹೇಳಿದರು.
ಮಾಸ್ಕ್, ಸ್ಯಾನಿಟೈಸರ್ ಮುಖಾಂತರ ಕೋವಿಡ್ ತಡೆಯಬಹುದು. ಅದಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಲಾಗುತ್ತಿದೆ. ಹೊಸವರ್ಷ ಬರುತ್ತಿದೆ, ಅದಕ್ಕೆ ಸಂಬಂಧಿಸಿದಂತೆ ಸಭೆ ಮಾಡಿ ಮಾರ್ಗಸೂಚಿ ಮಾಡಲಾಗುತ್ತಿದೆ ಎಂದರು.










