ಸಮ್ಮಿಶ್ರ ಸರ್ಕಾರದ ಬಜೆಟ್ ನ ಸಂಪೂರ್ಣ ವಿವರ…

353
firstsuddi

• ಡಿಸೆಂಬರ್ 2017 ರವರೆಗಿನ ರೈತರು ಮಾಡಿದ ಎಲ್ಲ ಸುಸ್ತಿ ಬೆಳೆ ಸಾಲಮನ್ನಾ. 2 ಲಕ್ಷವರೆಗಿನ ರೈತರ ಸಾಲಮನ್ನಾ ಘೋಷಣೆ.
• ವಿದ್ಯುತ್ ಯೂನಿಟ್ಗೆ 20 ಪೈಸೆ ಹೆಚ್ಚಳ.
• ಮದ್ಯದ ಮೇಲಿನ ಶೇ.4 ರಷ್ಟು ತೆರಿಗೆ ಹೆಚ್ಚಳ
• ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಆರಂಭಿಸಲು 30 ಕೋಟಿ ರೂ.
• ಇಸ್ರೇಲ್ ಮಾದರಿ ಕೃಷಿಗಾಗಿ 150 ಕೋಟಿ ರೂ. ಮೀಸಲು. ಕೋಲಾರ, ಗದಗ, ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕ ಜಾರಿ.
• ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ.
• ಸರ್ಕಾರಿ ಅಧಿಕಾರಿಗಳು, ಸಹಕಾರಿ ಕ್ಷೇತ್ರದ ಅಧಿಕಾರಿಗಳು, ಆದಾಯ ತೆರಿಗೆ ಕಟ್ಟಿದ ರೈತರು ಸಾಲಮನ್ನಾ ಸೌಲಭ್ಯ ಪಡೆಯಲು ಅನರ್ಹರು.
• ಅನ್ನಭಾಗ್ಯ, ಕ್ಷೀರಭಾಗ್ಯ, ಮಾತೃಪೂರ್ಣ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದ ಎಲ್ಲಾ ಯೋಜನೆಗಳ ಮುಂದುವರಿಕೆ.
• ಹಸಿರು ಕರ್ನಾಟಕ ಯೋಜನೆ: ಪರಿಸರ ಸಂರಕ್ಷಣೆಗಾಗಿ 10 ಕೋಟಿ ರೂ. ಮೀಸಲು.
• ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂ.
• ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ಮೀಸಲು.
• ಮಾತೃಶ್ರೀ ಯೋಜನೆಗಾಗಿ 350 ಕೋಟಿ ರೂ. ಮೀಸಲು.
• ಮೋಟಾರು ವಾಹನ ತೆರಿಗೆಯಲ್ಲಿ 50% ಹೆಚ್ಚಳ.
• ವಿವಿಧ ಧಾರ್ಮಿಕ ಪೀಠಗಳಿಗೆ 25 ಕೋಟಿ ರೂ.ಗಳ ಅನುದಾನ.
• ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಜಾರಿ. ಪ್ರತಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ 6 ತಿಂಗಳವರೆಗೆ (ಹೆರಿಗೆಯ ಕೊನೆಯ ಮೂರು ತಿಂಗಳು ಮತ್ತು ಹೆರಿಗೆ ನಂತರದ ಮೂರು ತಿಂಗಳು) 1 ಸಾವಿರ ರೂಪಾಯಿ ಸಹಾಯಧನ.
• ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ.
• ಏಳು ಜಿಲ್ಲೆಯಲ್ಲಿ ಕೈಗಾರಿಕಾ ತರಬೇತಿಗೆ 500 ಕೋಟಿ ಮೀಸಲು.
ಜಲಧಾರೆ ಯೋಜನೆ ಜಾರಿ: ಕುಡಿಯುವ ನೀರಿನ ಶುದ್ಧೀಕರಣಕ್ಕೆ ಜಲಾಶಯಗಳಿಂದ ಕುಡಿಯುವ ನೀರು ಶುದ್ಧೀಕರಣ. ಜಲಧಾರೆ ಯೋಜನೆಗಾಗಿ 53 ಕೋಟಿ ಮೀಸಲು.
• ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ. 600 ರೂಪಾಯಿಯಿಂದ 1000 ರೂಪಾಯಿಗೆ ಮಾಸಾಶನ ಹೆಚ್ಚಳ. ಇದರಿಂದ 32 ಲಕ್ಷ ಹಿರಿಯ ನಾಗರಿಕರಿಗೆ ಲಾಭ.
• ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಸ್ಥಾಪನೆ.
• ಮೈಸೂರು ಜಿಲ್ಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ.
• ಡಿಸೇಲ್ ಮೇಲಿನ ಸೆಸ್ ಹೆಚ್ಚಳ – ಸೆಸ್ ಶೇ. 19 ರಿಂದ ಶೇ.21 ರಷ್ಟು ಏರಿಕೆ.
• ಪೆಟ್ರೋಲ್ ದುಬಾರಿ – ಸೆಸ್ ಶೇ. 30 ರಿಂದ ಶೇ.32 ರಷ್ಟುಹೆಚ್ಚಳ.
• ಸ್ವ ಉದ್ಯೋಗ ಪ್ರೋತ್ಸಾಹಕ್ಕೆ ನೂತನ ‘ಕಾಯಕ ಯೋಜನೆ’- ಈ ಯೋಜನೆಯಡಿ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ.
• ಆಂಧ್ರದ ಮಾದರಿಯಲ್ಲಿ ಶೂನ್ಯ ಬಂಡವಾಳ ಕೃಷಿ ಪದ್ಧತಿ
• ಬೆಂಗಳೂರಿನ 6 ಕಡೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ.
• ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು.
• ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್
• ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂ ಮೀಸಲು.
• ಮಂಡ್ಯ ಮಿಮ್ಸ್ ಅಭಿವೃದ್ಧಿಗೆ 30 ಕೋಟಿ ರೂ ಮೀಸಲು.
• ನಮ್ಮ ಮೆಟ್ರೋ ಮೂರನೇ ಹಂತದ ಅಭಿವೃದ್ಧಿ.
• ಅನ್ನಭಾಗ್ಯ: ಅಕ್ಕಿ ಪ್ರಮಾಣ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಕೆ.
• ಬಿಪಿಎಲ್ ಪಡಿತರ ಚೀಟಿಗೆ 1 ಕೆಜಿ ಪಾಮ್ ಎಣ್ಣೆ, 1 ಕೆ.ಜಿ ಸಕ್ಕರೆ, 1 ಕೆಜಿ ಉಪ್ಪು, ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿ ಬೇಳೆ ವಿತರಣೆ.
• ಸಮಾಜ ಕಲ್ಯಾಣ ಇಲಾಖೆಗೆ 11,758 ಕೋಟಿ ರೂ. , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 6,199 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 3,866 ಕೋಟಿ ರೂ. ಮತ್ತು ಗ್ರಾಮೀಣಾಭಿವೃದ್ಧಿಗೆ 14,449 ಕೋಟಿ ರೂ. ಮೀಸಲು.
• ಬೀದರ್ ನಲ್ಲಿ ಕೃಷಿ ಉತ್ಪನ್ನ ಸಂರಕ್ಷಣಾ ಘಟಕ ಸ್ಥಾಪನೆ.