ಸಾಲದ ಕಿರುಕುಳ – ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ…

76
firstsuddi

ಹಾಸನ : ಸಾಲದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ನಗರದ ಉದಯಗಿರಿಯ ನಿವಾಸಿ ಅಂಬರೀಶ್ ಮೃತ ವ್ಯಕ್ತಿ. ಇವರು ಭಾನುವಾರ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಮೃತ ಅಂಬರೀಶ್ ವಿಡಿಯೋ ಸಹ ಮಾಡಿದ್ದಾರೆ.

ವೀಡಿಯೋದಲ್ಲಿ ಏನಿದೆ..?
ನನ್ನ ಸಾವಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ತಿಂಗಳಿಗೆ 50%, 30%, 52% ಬಡ್ಡಿ ತೆಗೆದುಕೊಂಡಿದ್ದಾರೆ. ನರೇಂದ್ರ, ರಾಜಪ್ಪ, ಸತ್ಯಮಂಗಲದ ಜಗ ಎಂಬವರಿಗೆ ಚೆಕ್ ಗಳಿಗೆ ನಾನು ಸಹಿ ಹಾಕಿ ಕೊಟ್ಟಿದ್ದೆ. ಕೊರೊನಾ ಬರುವ ಮುಂಚೆಯಿಂದ ವ್ಯವಹಾರ ಮಾಡಿದ್ದೆ. ಎಲ್ಲರಿಗೂ ಇದುವರೆಗೆ ಬಡ್ಡಿ ಕೊಟ್ಟಿದ್ದೇನೆ. ನನ್ನ ಇನ್ವಾಯ್ಸ್, ಬ್ಯುಸಿನೆಸ್ ನೋಡಿ ಅವರು ಸಾಲ ಕೊಟ್ಟಿದ್ದರು. ನನ್ನ ಹೆಂಡತಿ ಸಹಿ ಮಾಡಿ ಕೊಟ್ಟಿದ್ದೇನೆ. ಅದೊಂದು ಮೋಸ ಮಾಡಿದ್ದೇನೆ. 18-20 ಚೆಕ್ ಗಳು, ದಾಖಲೆಗಳನ್ನು ಕೊಡುತ್ತಿಲ್ಲ. 3 ಲಕ್ಷ ಸಾಲಕ್ಕೆ ಬಡ್ಡಿ 13 ಲಕ್ಷ ಆಗಿದೆ ಎಂದು ಎಲ್ಲರು ಕೇಸ್ ಗಳನ್ನ ಹಾಕುತ್ತಿದ್ದಾರೆ ಅಂತ ವಿಷದ ಬಾಟಲ್ ಇಟ್ಟುಕೊಂಡು ಅಂಬರೀಶ್ ಕಣ್ಣೀರಿಟ್ಟು ವಿಡಿಯೋ ಮಾಡಿದ್ದಾರೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.