ಧರಿಸುವ ಬಟ್ಟೆಗೂ ಸರ್ಕಾರಕ್ಕೂ ಏನು ಸಂಬಂಧ : ಕರ್ನಾಟಕ ಸರ್ಕಾರಕ್ಕೆ ಕೆಸಿಆರ್ ಪ್ರಶ್ನೆ…

62
firstsuddi

ಹೈದರಾಬಾದ್ : ಹಿಜಾಬ್ ವಿವಾದ ಸಂಬಂಧ ಇಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಕುರಿತು ತೆಲಂಗಾಣ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು, ಯಾರು ಏನು ಧರಿಸುತ್ತಾರೆ ಎಂಬುದಕ್ಕೂ ಸರ್ಕಾರಕ್ಕೂ ಏನು ಸಂಬಂಧ? ಹಿಜಾಬ್ ವಿವಾದ ಉದ್ಭವವಾಗಿದ್ದು ಯಾಕೆ? ಎಂದು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಒಟ್ಟಾರೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ಧರಿಸುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿದ್ದು, ಇದೀಗ ಕೋರ್ಟ್ ತೀರ್ಪಿನ ವಿಚಾರವಾಗಿ ಪರ-ವಿರೋಧ ಚರ್ಚೆ ಆರಂಭಗೊಂಡಿದೆ.