ಸಾವಿರಾರು ನಿರ್ಗತಿಕರ ಬಾಳಿಗೆ ಬೆಳಕಾಗಿದ್ದ ಸೋನು ಸೂದ್ ಅವರಿಗೆ ಗುಡಿ ನಿರ್ಮಿಸಿದ ತೆಲಂಗಾಣ ಜನತೆ…

124
firstsuddi

ತೆಲಂಗಾಣ : ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸಾವಿರಾರು ನಿರ್ಗತಿಕರ ಬಾಳಿಗೆ ಬೆಳಕಾಗಿದ್ದ ನಟ ಸೋನು ಸೂದ್ ಅವರಿಗೆ ತೆಲಂಗಾಣದ ಅಭಿಮಾನಿಗಳು ದೇವಾಲಯವನ್ನು ಕಟ್ಟಿಸಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ತಮ್ಮ ಸ್ವಗ್ರಾಮಕ್ಕೆ ತೆರಳಲು ಬಸ್ ವ್ಯವಸ್ಥೆ, 20 ಸಾವಿರ ವಲಸೆ ಕಾರ್ಮಿಕರಿಗೆ ವಸತಿ ವ್ಯವಸ್ಥೆ, ಪುಟ್ಟ ಬಾಲಕನ ಶಸ್ತ್ರಚಿಕಿತ್ಸೆಗೆ ಧನಸಹಾಯ, ಕೆಲವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ, ರೈತರೊಬ್ಬರಿಗೆ ಟ್ರ್ಯಾಕ್ಟರ್ ಕೊಡಿಸಿದ್ದು ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯವನ್ನು ಮಾಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಈ ಕಾರಣದಿಂದಾಗಿ ತೆಲಂಗಾಣದ ಸಿದ್ದೀಪೇಟೆ ಜಿಲ್ಲೆಯ ದುಬ್ಬಾ ತಾಂಡಾದ ಜನತೆ ಜಿಲ್ಲಾಧಿಕಾರಿಗಳ ಸಹಾಯ ಪಡೆದುಕೊಂಡು ಸೋನು ಸೂದ್ ಅವರ ಪುತ್ಥಳಿ ನಿರ್ಮಿಸಿ ಗುಡಿಯನ್ನು ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.