ಸಿಎಎ ಬೆಂಬಲಿಸಿದಕ್ಕೆ ಕೇರಳದಲ್ಲಿ ಹಿಂದೂಗಳಿಗೆ ನೀರು ನೀಡುತ್ತಿಲ್ಲ ಎಂದು ಟ್ವೀಟ್ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲು…

224
firstsuddi

ತಿರುವನಂತಪುರಂ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದಕ್ಕೆ ಕೇರಳದಲ್ಲಿ ಹಿಂದೂಗಳಿಗೆ ನೀರು ನೀಡುತ್ತಿಲ್ಲ ಎಂದು ಸಂಸದೆ ಶೋಭ ಕರಂದ್ಲಾಜೆ ಅವರು ಟ್ವೀಟ್ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಶೋಭಾ ಕರಂದ್ಲಾಜೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೋಭಾ ಕರಂದ್ಲಾಜೆ ಅವರು ಜ.22 ರಂದು ತಮ್ಮ ಟ್ವಿಟರ್ ಮೂಲಕ “ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ. ಸಿಎಎ ಬೆಂಬಲಿಸಿದ ಮಲಪ್ಪುರಂನ ಕಟ್ಟಿಪುರಂ ಪಂಚಾಯತ್‍ನ ಹಿಂದೂಗಳಿಗೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಈ ಪ್ರದೇಶದಲ್ಲಿ ಸೇವಾ ಭಾರತಿ ನೀರು ಸರಬರಾಜು ಮಾಡುತ್ತಿದೆ ಎಂದು ವಿವಾಧಾತ್ಮಕವಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಆಧರಿಸಿ ಕೇರಳ ಪೊಲೀಸರು ಶೋಭಾ ಕರಂದ್ಲಾಜೆ ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.