ಸಿಡಿ ಯುವತಿ ಯಾವುದೇ ಹೇಳಿಕೆಯನ್ನು ಬದಲಾಯಿಸಿಲ್ಲ : ವಕೀಲ ಸೂರ್ಯ ಮುಕುಂದರಾಜ್ ಸ್ಪಷ್ಟನೆ…

118
firstsuddi

ಬೆಂಗಳೂರು : ಸಿಡಿ ಯುವತಿ ಇಂದು ಎಸ್‍ಐಟಿ ಮುಂದೆ ಹಾಜರಾಗಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಿಂಗ್ ಪಿನ್ ಗಳಾದ ನರೇಶ್ ಗೌಡ ಮತ್ತು ಶ್ರವಣ್ ಅವರು ನನ್ನನ್ನು ಹನಿಟ್ಯ್ರಾಪ್ ಆಗಿ ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಳು ಎಂಬ ಮಾಹಿತಿ ಲಬ್ಯವಾಗಿತ್ತು. ಆದರೆ ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಕೀಲರಾದ ಸೂರ್ಯ ಮುಕುಂದರಾಜ್ ಅವರು ಸಿಡಿ ಯುವತಿ ಯಾವುದೇ ಹೇಳಿಕೆಯನ್ನು ಬದಲಾಯಿಸಿಲ್ಲ. ಇದೆಲ್ಲಾ ಊಹಾಪೋಹ, ಈ ಹಿಂದೆ ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಗಳಿಗೆ ಆಕೆ ಬದ್ಧಳಾಗಿದ್ದಾಳೆ. ಎಸ್ಐಟಿ ಅಧಿಕಾರಿಗಳು ನಿನ್ನೆ ಸಂತ್ರಸ್ತೆಗೆ ಪ್ರಕರಣ ಸಂಬಂಧ ಸ್ಕ್ರೀನ್ ಶಾಟ್, ವಾಟ್ಸಾಪ್ ಚಾಟ್, ಸೇರಿದಂತೆ ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಸಲ್ಲಿಸಿ ಎಂದು ಎಸ್‍ಐಟಿ ನೋಟಿಸ್ ನೀಡಿತ್ತು. ಅದರಂತೆ ಇಂದು ತನಿಖಾಧಿಕಾರಿಗಳ ಮುಂದೆ ಸಂತ್ರಸ್ತ ಯುವತಿ ವಿಚಾರಣೆಗೆ ಹಾಜರಾಗಿ ದಾಖಲಾತಿ ಸಲ್ಲಿಸಿ ತನಿಖೆಗೆ ಸಹಕರಿಸಿದ್ದಾರೆ. ಮತ್ತೊಮ್ಮೆ ನ್ಯಾಯಾಲಯದಲ್ಲಿ ಯುವತಿ ಹೇಳಿಕೆ ನೀಡುವುದಿಲ್ಲ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.