‘ಸಿಡಿ ಲೇಡಿ’ ಸಿನಿಮಾ ಟೈಟಲ್ ರಿಜಿಸ್ಟರ್ ಆಗೇಬಿಡ್ತು..!

169
Firstsuddi

ಮೈಸೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಒಂದು ಸಿನಿಮಾ ಆಗಿ ಹೊರಹೊಮ್ಮಲಿದ್ದು, ಈಗಾಗಲೇ ಟೈಟಲ್ ಕೂಡ ರಿಜಿಸ್ಟರ್ ಆಗಿದೆ.

ಹೌದು. ‘ಸಿಡಿ ಲೇಡಿ’ ಸಿನಿಮಾಗಾಗಿ ಟೈಟಲ್ ನೋಂದಣಿ ಮಾಡಿಸಿರುವುದಾಗಿ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಸ್ಪಷ್ಟನೆ ನೀಡಿದ್ದು, ಸಿಡಿ ಕೇಸ್ನಲ್ಲಿ ಆದ ಬೆಳವಣಿಗೆಗಳ ಹಿನ್ನೆಲೆ ಸಿಡಿ ಲೇಡಿ ಎಂದು ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ. ಕಥೆ ಚಿತ್ರಕಥೆ ಇನ್ನೂ ಸಿದ್ಧವಾಗಿಲ್ಲ. ಸಿನಿಮಾ ಯಾವಾಗ ಸೆಟ್ಟೇರುತ್ತದೆ ಅನ್ನೋ ಬಗ್ಗೆಯೂ ನಿರ್ಧರಿಸಿಲ್ಲ. ಮುಂದೆ ಈ ಎಲ್ಲಾ ವಿಚಾರಗಳು ಫೈನಲ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.