ಸುಪ್ರೀಂಕೋರ್ಟ್ ಸಿಜೆಐಯಾಗಿ ಲಲಿತ್ ನೇಮಕಕ್ಕೆ ನ್ಯಾ.ರಮಣ ಶಿಫಾರಸು…

83
firstsuddi

ನವದೆಹಲಿ : ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬಹುದು ಎಂದು ಭಾರತದ ಹಾಲಿ ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ಅವರು ಕೇಂದ್ರ ಸರ್ಕಾರಕ್ಕೆ ಲಿಖಿತ ಶಿಫಾರಸು ಮಾಡಿದ್ದಾರೆ.

ಆಗಸ್ಟ್ 26 ರಂದು ಸಿಜೆಐ ರಮಣ ಅಧಿಕಾರದಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇತ್ತೀಚೆಗೆ ಸಿಜೆಐಗೆ ಪತ್ರ ಬರೆದು ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಮಣ ಅವರು, ಲಲಿತ್ ಮುಂದಿನ ಸುಪ್ರೀಂ ಸಿಜೆಐ ಮಾಡಬಹುದು ಎಂದು ಹೆಸರು ಸೂಚಿಸಿದರು.

ಮಹಾರಾಷ್ಟ್ರ ಮೂಲದ ನ್ಯಾಯಮೂರ್ತಿ ಯು ಯು ಲಲಿತ್ ಅವರು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಅವರ ಕಾರ್ಯಾವಧಿ ಸಮಯ ಮೂರು ತಿಂಗಳಿಗಿಂತಲೂ ಕಡಿಮೆ ಇರುತ್ತದೆ. ಲಲಿತ್ ಅವರು ನವೆಂಬರ್ 8, 2022ರಂದು ನಿವೃತ್ತರಾಗಲಿದ್ದಾರೆ.