ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಇಬ್ಬರು ಯುವಕರು ಜಲ ಸಮಾಧಿ ಆಗಿರುವ ಘಟನೆ ತಾಲ್ಲೂಕಿನ ರಾಜಹಂಸಘಡ ಬಳಿ ನಡೆದಿದೆ.
ನಗರದ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರ ಪೈಕಿ ಒಬ್ಬ ಯುವಕ ಪಾರಾಗಿದ್ದಾನೆ.
ನಿನ್ನೆ ಮಧ್ಯಾಹ್ನ ಫೋಟೋಶೂಟ್ ಗೆಂದು ಯುವಕರು ಕ್ವಾರಿಗೆ ಇಳಿದಿದ್ದರು. ಮಳೆಯಿಂದ ಕಲ್ಲು ಕ್ವಾರಿ ಕೆರೆಯಂತಾಗಿತ್ತು. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಯುವಕರು ಕ್ವಾರಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಮೂವರಲ್ಲಿ ಒಬ್ಬ ಯುವಕ ಪಾರಾಗಿದ್ದು, ಇನ್ನಿಬ್ಬರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಇಬ್ಬರ ಮೃತದೇಹ ಹೊರತೆಗೆದಿದ್ದಾರೆ. ಈ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










