ಮಲಂಗೊ : ಇಂಡೋನೇಷ್ಯಾದ ನಂತರ ಇದೀಗ ಸೊಲೊಮನ್ ದ್ವೀಪಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇಂದು ಮುಂಜಾನೆ ಸೊಲೊಮನ್ ದ್ವೀಪದಲ್ಲಿನ ಮಲಂಗೊದ ನೈಋತ್ಯ ಭಾಗದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದುವನ್ನು 15 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ. ಸದ್ಯ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಇಂಡೋನೇಷ್ಯಾದ ಪಶ್ಚಿಮ ಜಾವಾ ನಗರದಲ್ಲಿ ನಿನ್ನೆ ಸಂಭವಿಸಿದ್ದ 5.6 ತೀವ್ರತೆಯ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ.










