ಹಾಸನದಿಂದ 16 ಮಂದಿ ದೆಹಲಿಗೆ ತೆರಳಿದ್ದ ಮಾಹಿತಿ : ಜಿಲ್ಲಾಧಿಕಾರಿ ಆರ್. ಗಿರೀಶ್ ಸ್ಪಷ್ಟನೆ…

135
firstsuddi

ಹಾಸನ : ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಎಂದು ದೆಹಲಿ ಗುರುತಿಸಲ್ಪಟ್ಟಿದೆ. ಹಾಸನದಿಂದ 16 ಮಂದಿ ದೆಹಲಿಗೆ ತೆರಳಿದ್ದ ಮಾಹಿತಿ ಇದ್ದು, ಅದರಲ್ಲಿ ಈಗ 6 ಮಂದಿ ಜಿಲ್ಲೆಯಲ್ಲಿ ಇದ್ದಾರೆ. ಉಳಿದವರು ದೆಹಲಿ, ವಾರಂಗಲ್, ಕುಂದಾಪುರ, ಜಮ್ಮು ಕಾಶ್ಮೀರದಲ್ಲಿ ಇರುವ ಮಾಹಿತಿ ಇದೆ. ಹಾಸನ ಜಿಲ್ಲೆಯಲ್ಲಿ ಇರುವವರನ್ನು ಪ್ರತ್ಯೇಕಿಸಿ ನಿಗಾ ವಹಿಸಲಾಗುತ್ತಿದೆ. ಯಾರಿಗೂ ಈ ವರೆಗೆ ರೋಗ ಲಕ್ಷಣಗಳು ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಇರುವ 6 ಮಂದಿಯಲ್ಲಿ ಒಬ್ಬರು ಕೊಡಗಿನವರು ಸೇರಿದ್ದು, ಅವರೂ ಹೋಂ ಕ್ವಾರಂಟೈನ್‍ನಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ತಿಳಿಸಿದ್ದಾರೆ.