ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ‘ಕಾಂತಾರ’ ಅಬ್ಬರ : 50 ಕೋಟಿ ರೂ. ಕಲೆಕ್ಷನ್…

78
firstsuddi

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ ರಿಲೀಸ್ ಆದಾಗಿನಿಂದಲೂ ಚಿತ್ರದ ಅಬ್ಬರ ಮಾತ್ರ ಕಡಿಮೆ ಆಗಿಲ್ಲ. ಇದೀಗ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿದೆ.

ಹೊಂಬಾಳೆ ಸಂಸ್ಥೆಯ `ಕಾಂತಾರ’ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಮೊದಲ ವಾರ 15 ಕೋಟಿ, 2ನೇ ವಾರ 16.70 ಕೋಟಿ, 3ನೇ ವಾರ 19.95 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟು 51.65 ಕೋಟಿ ಗಳಿಸಿದೆ. ರಿಷಬ್ ನಟನೆ ಹಾಗೂ ನಿರ್ದೇಶನಕ್ಕೆ ಬಾಲಿವುಡ್ ಮಂದಿ ಬೋಲ್ಡ್ ಆಗಿದ್ದಾರೆ.

ಇನ್ನೂ ‘ಕಾಂತಾರ’ ಹಿಂದಿ ವರ್ಷನ್ ನಲ್ಲಿ ಬಾಹುಬಲಿ 2, ಕೆಜಿಎಫ್ 2, ಆರ್ ಆರ್ ಆರ್, 2.0 ಬಾಹುಬಲಿ, ‘ಪುಷ್ಪ’ ನಂತರ 7ನೇ ಹೈಯೆಸ್ಟ್ ಕಲೆಕ್ಷನ್ ಸಿನಿಮಾವಾಗಿದೆ.