ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲೇ ಉಲ್ಲೇಖಿಸಿಲ್ಲ : ಸೋನು ನಿಗಮ್.

59
firstsuddi

ನವದೆಹಲಿ : ರಾಷ್ಟ್ರ ಭಾಷೆಯ ವಿಚಾರವಾಗಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಇದೀಗ ಖ್ಯಾತ ಗಾಯಕ ಸೋನು ನಿಗಮ್ ಕೂಡ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳುವ ಮೂಲಕ ಅಜಯ್ ದೇವಗನ್ ಹೇಳಿಕೆ ವಿರುದ್ಧ ನಿಂತಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸೋನು ನಿಗಮ್ , ‘ಭಾಷಾ ವಿಚಾರದಲ್ಲಿ ದೇಶವನ್ನು ಒಡೆಯುವಂತೆ ಕೆಲಸ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಹೆಚ್ಚು ಪುರಾತನ ಭಾಷೆ ತಮಿಳು. ಹಾಗಾದರೆ, ತಮಿಳು ರಾಷ್ಟ್ರ ಭಾಷೆ ಎನ್ನುವುದಕ್ಕೆ ಆಗತ್ತಾ? ನಾವು ಎಲ್ಲಿಯೇ ಹೋದರೂ ಇಂಗ್ಲಿಷ್ ಬಳಕೆ ಆಗುತ್ತಿದೆ. ಕೋರ್ಟ್ ನಲ್ಲೂ ಇಂಗ್ಲಿಷ್ ಅನ್ನೇ ಬಳುಸುತ್ತಾರೆ. ಹಾಗಾಗಿ ಇಲ್ಲಿ ರಾಷ್ಟ್ರ ಭಾಷೆ ಎನ್ನುವುದೇ ಉದ್ಭವಿಸಲ್ಲ ಎಂದಿದ್ದಾರೆ.

ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿಲ್ಲ. ಅದನ್ನು ಬೇರೆಯವರು ಮಾತನಾಡಬೇಕು ಎಂಬ ಒತ್ತಾಯವೂ ಮಾಡುವಂತಿಲ್ಲ. ಹಿಂದಿ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ ಅಷ್ಟೇ. ಆಯಾ ಭಾಷಿಕರಿಗೆ ತಮ್ಮ ಮಾತೃಭಾಷೆಗಳಲ್ಲಿ ಮಾತನಾಡುವ ಹಕ್ಕಿದೆ ಎಂದು ಹೇಳಿದ್ದಾರೆ.