ಹಿಂದೂ ಸಂಪ್ರದಾಯದಂತೆ ನೆರವೇರಿದ ಚಿರಂಜೀವಿ ಅಂತಿಮ ವಿಧಿವಿಧಾನ…

130
firstsuddi

ಬೆಂಗಳೂರು : ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಗೌಡರ ಸಂಪ್ರದಾಯದಂತೆ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್‍ನಲ್ಲಿ ನೆರವೇರಿತು. ಬಸವನಗುಡಿಯಲ್ಲಿ ಇರುವ ತಮ್ಮ ನಿವಾಸದಿಂದ ಚಿರಂಜೀವಿ ಅವರ ಪಾರ್ಥೀವ ಶರೀರವನ್ನು ವಿಶೇಷ ವಾಹನದಲ್ಲಿ ಇರಿಸಿ ನೆಲಗುಡಿಯಲ್ಲಿ ಇರುವ ಧ್ರುವ ಸರ್ಜಾ ಅವರ ಫಾರ್ಮ್‍ಹೌಸ್ ವರೆಗೂ ಮೆರವಣಿಗೆ ಮೂಲಕ ತಂದು ಕುಟುಂಬಸ್ಥರು ಹಾಗೂ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಯಿತು.