ಕಲಬುರಗಿ : ಹಿರಿಯ ರಂಗ ಕಲಾವಿದೆ ಶೋಭಾ ರಂಜೋಳಕರ್ ಅವರು ನಿನ್ನೆ ಹೃದಯಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಅತ್ಯಂತ ಕಿರಿಯ ವಯಸ್ಸಿನಲ್ಲೇ ರಂಗ ಪ್ರವೇಶ ಮಾಡಿದ್ದ ಅವರು, ನಾಲ್ಕು ದಶಕಗಳಿಂದ ರಂಗ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಡಾ. ಚಂದ್ರಶೇಖರ್ ಕಂಬಾರ ಅವರೊಂದಿಗೆ ಬೆಳದಿಂಗಳಾಗಿ ಬಾ, ಮಹಾದಾಸೋಹಿ ಶರಣಬಸವೇಶ್ವರ, ಗೌತಮ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಅಭಿನಯಿಸುವುದರ ಜೊತೆಗೆ ದೂರದರ್ಶನ ಮತ್ತು ಆಕಾಶವಾಣಿಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.










