ಚಿಕ್ಕಮಗಳೂರು ಜ 31: ತಾಲೂಕಿನ ಅಂಬಳೆಯಲ್ಲಿ ಸ್ಥಳೀಯ ವಿಪ್ರ ಸಮುದಾಯದವರಿಗೆ ಸಭೆ ಸಮಾರಂಭ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮದ ಬ್ರಾಹ್ಮಣ ಸೇವಾ ಸಮಿತಿ ನಿರ್ಮಿಸಿರುವ ಶ್ರೀ ವಿದ್ಯಾರಣ್ಯ ಸಭಾಭವನದ ಲೋಕಾರ್ಪಣೆ ಶುಕ್ರವಾರ ನಡೆಯಿತು. ಲೋಕಾರ್ಪಣೆ ಅಂಗವಾಗಿ ವಾಸ್ತು ರಾ ಕ್ಷೋಘ್ನ ಹೋಮ, ನವಗ್ರಹ ಹೋಮ, ಶ್ರೀ ಮಹಾಗಣಪತಿ ಹೋಮ, ಮೃತ್ಯುಂಜಯ ಹೋಮ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಭವನ ನಿರ್ಮಾಣಕ್ಕೆ ಸಹಕಾರ ನೀಡಿದವರನ್ನು, ದುಡಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು ಈ ವೇಳೆ ಮಾತನಾಡಿದ ಅಂಬಳೆ ಬ್ರಾಹ್ಮಣ ಸೇವಾ ಸಮಿತಿ ಕಾರ್ಯದರ್ಶಿ ಪ್ರಕಾಶ್ ಭವನ ನಿರ್ಮಾಣಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಶತಾಯುಷಿ ಮಂಜುನಾಥ ಭಟ್ ಅವರನ್ನು ಈ ವೇಳೆ ಗೌರವಿಸಲಾಯಿತು ಅಂಬಳೆ ಬ್ರಾಹ್ಮಣ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಅಶ್ವತ್ಥನಾರಾಯಣ, ಶ್ರೀಧರ್ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದೊಡ್ಡೇಗೌಡ ಉಪಸ್ಥಿತರಿದ್ದರು. ಅಂಬಳೆಯಿಂದ ಹೋಗಿ ಬೇರೆ ಊರುಗಳಲ್ಲಿ ನೆಲೆಸಿರುವ ಕುಟುಂಬಗಳು ಭವನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.










