ಬಣಕಲ್ : ಒಕ್ಕಲಿಗರ ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸಲು ಮತ್ತು ಸಮುದಾಯದ ಪರ ಕಾರ್ಯ ನಿರ್ವಹಿಸುವವರನ್ನು ಸಂಘಟಿತಗೊಳಿಸಲು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟವನ್ನು ಆರಂಭಿಸಲಾಗಿದ್ದು ಈ ಒಕ್ಕೂಟದ ಮೂಲಕ ಒಕ್ಕಲಿಗರ ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ನಾಗಣ್ಣ ಬಾಣಸವಾಡಿ ಹೇಳಿದರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಅವರು ಹರಿದು ಹಂಚಿ ಹೋಗಿರುವ ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನ ಇದಾಗಿದ್ದು ಒಕ್ಕಲಿಗ ಸಮುದಾಯದ ಜನರು ಕೂಡ ಆರ್ಥಿಕ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತಂದು ಅವರಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವುದು ಒಕ್ಕೂಟದ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಭಾಗದಿಂದಲೆ ಈ ಸಂಘಟನೆಯನ್ನು ಬಲವರ್ದನೆಗೊಳಿಸಿ ಸಮುದಾಯದ ಪ್ರತಿಯೊಬ್ಬರನ್ನು ಸಂಘಟಿತಗೊಳಿಸಿ ಸಮುದಾಯದ ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಡಾ.ದೇವರಾಜಗೌಡ ಬೆಂಗಳೂರು, ಲಕ್ಷ್ಮಣಗೌಡ ಕೋಲಾರ ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಮೂಲಕ ಒಕ್ಕಲಿಗ ಸಮುದಾಯದ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗುವುದು :...










