ಬೆಂಗಳೂರು : ಸ್ಟಾರ್ ನಟನ ತಂಗಿಯ ಪಾತ್ರಕ್ಕೆ ಆಡಿಷನ್ ಇದೆ ಎಂದು ಕರೆಸಿಕೊಂಡು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಕನ್ನಡದ ಖ್ಯಾತ ನೃತ್ಯ ನಿರ್ದೇಶಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪವನ್ ಬಂಧಿತ ನೃತ್ಯ ನಿರ್ದೇಶಕ ಎಂದು ಗುರುತಿಸಲಾಗಿದ್ದು, ಪವನ್ ಅವರು ಕನ್ನಡದ ಖ್ಯಾತ ರಿಯಾಲಿಟಿ ಶೋಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ತಮ್ಮ ಬಳಿ ಡ್ಯಾನ್ಸ್ ಕಲಿಯುತ್ತಿದ್ದ ಯುವತಿಯನ್ನು ಜ12ರಂದು ಬೆಳಿಗ್ಗೆ ಕರೆ ಮಾಡಿ ಸುದೀಪ್ ಅವರು ನಟಿಸುತ್ತಿರುವ ಚಿತ್ರಕ್ಕೆ ತಂಗಿಯ ಪಾತ್ರದ ಆಡಿಷನ್ ಇದೆ ಎಂದು ನಂಬಿಸಿ ತಮ್ಮ ಡ್ಯಾನ್ಸ್ ಕ್ಲಾಸ್‍ಗೆ ಕರೆಸಿಕೊಂಡು ಬಳಿಕ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ ನಿರ್ದೇಶಕರ ಸೋಗಿನಲ್ಲಿ ಮಾತನಾಡಿಸಿದ್ದಾರೆ. ಬಳಿಕ ಯುವತಿಗೆ ನೀರಿನಲ್ಲಿ ಮತ್ತು ಬರುವ ಔಷದಿಯನ್ನು ಬೆರಸಿ ತಮ್ಮ ಮೊಬೈಲ್‍ನಲ್ಲಿ ಅಶ್ಲೀಲ ವೀಡಿಯೋವನ್ನು ತೋರಿಸಿದ್ದಾರೆ. ಯುವತಿ ನೀರು ಕುಡಿದು ಪ್ರಜ್ಞೆ ತಪ್ಪುತ್ತಿದ್ದಂತೆ ಪವನ್ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ಸಂತ್ರಸ್ಥ ಯುವತಿಯ ಪೋಷಕರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಪವನ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.










